ವಿಜಯಪುರ(ಬೆಂ.ಗ್ರಾಮಾಂತರ):ಪಟ್ಟಣದ ಕೆರೆಕೋಡಿಯ ದಂಡಿಗಾನಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಯ ಪಂಚಲೋಹದ ವಿಗ್ರಹ, ಅನ್ನಪೂರ್ಣೇಶ್ವರಿ ದೇವಿ ಹಾಗೂ ಸುಬ್ರಮಣ್ಯಸ್ವಾಮಿ ದೇವರ ಶಿಲಾಬಿಂಬ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ
ನಡೆಯಿತು.
ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಯಾಗಶಾಲೆ, ಪ್ರವೇಶ, ಅಂಕುರಾರ್ಪಣೆ, ಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹ, ಪಂಚಗವ್ಯ ಸ್ಥಾಪನಾ, ರಕ್ಷಾಬಂಧನ, ಕಳಶಾರಾಧನೆ, ಗಣಪತಿ ಹೋಮ, ರಾಕ್ಷೋಗ್ನ ಹೋಮ, ವಾಸ್ತುಹೋಮ, ಬಿಂಬಶುದ್ಧಿ, ಕಳಾಹೋಮ, ಪೂರ್ಣಾಹುತಿ ಪಂಚಾಮೃತ ಅಭಿಷೇಕ, ದಿವ್ಯಅಲಂಕಾರ, ಅಷ್ಟಬಲಿ, ಕೂಶ್ಮಾಂಡ ಬಲಿ, ನಾರಿಕೇಳ ಬಲಿ ಸೇರಿದಂತೆ ಹಲವಾರು ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕ ಜೆ.ವಿ. ಮುನಿರಾಜು ನೆರವೇರಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದರು. ಮಾಲಾಧಾರಿ ಭಕ್ತರು ಅನ್ನ ಸಂತರ್ಪಣೆ ಮಾಡಿದರು. ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಸದಸ್ಯರು ಕಾರ್ಯಕ್ರಮದ ಉಸ್ತುವಾರಿ
ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.