ADVERTISEMENT

ದೊಡ್ಡಬಳ್ಳಾಪುರ | ಚೆಸ್ ಪಂದ್ಯಾವಳಿ: 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:17 IST
Last Updated 20 ಫೆಬ್ರುವರಿ 2024, 15:17 IST
ದೊಡ್ಡಬಳ್ಳಾಪುರ ಕಾವೇರಿ ಕಲ್ಯಾಣ ಮಂಟಪದಲ್ಲಿ ಯುವ ಅಕಾಡೆಮಿ ಮತ್ತು ಮಹಾಗ್ರೀವ ಅಕಾಡೆಮಿ ವತಿಯಿಂದ ನಡೆದ ಓಪನ್ ರಾಫಿಡ್ ಚೆಸ್ ಪಂದ್ಯಾವಳಿಯನ್ನು ಯುವ ಅಕಾಡೆಮಿ ಸಂಸ್ಥಾಪಕ ಸಿ.ಮಂಜುನಾಥ್ ಉದ್ಘಾಟಿಸಿದರು
ದೊಡ್ಡಬಳ್ಳಾಪುರ ಕಾವೇರಿ ಕಲ್ಯಾಣ ಮಂಟಪದಲ್ಲಿ ಯುವ ಅಕಾಡೆಮಿ ಮತ್ತು ಮಹಾಗ್ರೀವ ಅಕಾಡೆಮಿ ವತಿಯಿಂದ ನಡೆದ ಓಪನ್ ರಾಫಿಡ್ ಚೆಸ್ ಪಂದ್ಯಾವಳಿಯನ್ನು ಯುವ ಅಕಾಡೆಮಿ ಸಂಸ್ಥಾಪಕ ಸಿ.ಮಂಜುನಾಥ್ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಯುವ ಅಕಾಡೆಮಿ ಸಂಸ್ಥಾಪಕ ಸಿ.ಮಂಜುನಾಥ್ ಹೇಳಿದರು.

ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ಯುವ ಅಕಾಡೆಮಿ ಮತ್ತು ಮಹಾಗ್ರೀವ ಅಕಾಡೆಮಿ ವತಿಯಿಂದ ನಡೆದ ಓಪನ್ ರಾಫಿಡ್ ಚೆಸ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿ ಹೆಚ್ಚಿಸಲು ಪಂದ್ಯಾವಳಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವ ಜತೆಗೆ ಕಲಿಕೆಗೂ ನೆರವಾಗಲಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ನಿರಂತರ ಅಭ್ಯಾಸದಿಂದ ಯಶಸ್ಸು ಗಳಿಸಬೇಕು ಎಂದರು.

ADVERTISEMENT

ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 50 ಜನ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಯಿತು. ವಕೀಲರಾದ ಸಂಜೀವಪ್ಪ, ಮೋಹನ್,ರಾಷ್ಟ್ರೀಯ ಚೆಸ್ ಆಟಗಾರ್ತಿ ಜಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.