ಈ ಹೋಟೆಲ್‌ನ ಚಿಕನ್ ಧಮ್ ಬಿರಿಯಾನಿ ಗ್ರಾಹಕರ ನಾಲಿಗೆ ತಣಿಸುತ್ತದೆ. ರುಚಿಗೆ ಜನರು ಇದರತ್ತ ಆಕರ್ಷಣೆಯಾಗುತ್ತಿದ್ದಾರೆ. ಬಿರಿಯಾನಿ ಘಮಲು ಗ್ರಾಹಕರನ್ನು ಹೋಟಲ್‌ನತ್ತ ಸೆಳೆಯುತ್ತಿದೆ.
ಹಸಿಗಾಳ ಮತ್ತು ಹೊಸಕೋಟೆ, ದೇವನಹಳ್ಳಿ ಸುತ್ತಮುತ್ತಲ್ಲಿನ ಹತ್ತಾರು ಗ್ರಾಮಗಳ ಜನರು ಮುಗಿಬಿದ್ದು ಬಿರಿಯಾನಿ ಸವಿಯುತ್ತಾರೆ.
ಇಲ್ಲಿ ಸಿಗುವ ಗುಣಮಟ್ಟದ ಬಿರಿಯಾನಿ ದೊಡ್ಡವರಿಂದ ಹಿಡಿದು ಮಕ್ಕಳು, ಮಹಿಳೆಯರಿಗೆ ಅಚ್ಚುಮೆಚ್ಚು. ಹಸಿಗಾಳ ಗ್ರಾಮದಿಂದ ಹೊಸಕೋಟೆ ಹೋಗುವ ಮುಖ್ಯ ರಸ್ತೆಯಲ್ಲಿ ಬಲ ಬದಿಯಲ್ಲಿ ಈ ಹೋಟಲ್ ಇದೆ. ಹಸಿಗಾಳ ಗ್ರಾಮದ ಸಂತೋಷ್ ಎಚ್.ಎಂ ಮತ್ತು ಸಂದೀಪ್ ಸಹಪಾಠಿಗಳು ಈ ಹೋಟೆಲ್ ಮುನ್ನಡೆಸುತ್ತಿದ್ದಾರೆ.
2021ರಲ್ಲಿ ಈ ಹೋಟೆಲ್ ಆರಂಭಗೊಂಡಿದೆ. ಅಂದಿನಿಂದಲೂ ರುಚಿ ಮತ್ತು ಸ್ವಾದಿಷ್ಟಕ್ಕೆ ಹೆಸರಾಗಿದೆ. ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ, ಅತ್ತಿಬೆಲೆ, ಸಾದಪ್ಪನಹಳ್ಳಿ, ಯನಗುಂಟೆ, ಕಮ್ಮಸಂದ್ರ ಮತ್ತು ಕಸಬಾ ಹೋಬಳಿ ತಿಮ್ಮಸಂದ್ರ, ಲಕ್ಕೊಂಡಹಳ್ಳಿ , ವಾಬಸಂದ್ರ, ಕಂಬಳೀಪುರ, ವೆಂಕಟಾಪುರ, ಹೊಸಕೋಟೆ, ದೇವನಹಳ್ಳಿ ಹಾಗೂ ಬೆಂಗಳೂರು ಸುತ್ತಮುತ್ತಲಿನ ಜನರು ಇಲ್ಲಿಗೆ ಬರುತ್ತಾರೆ.
ವಾರದಲ್ಲಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಈ ಹೋಟಲ್ ತೆರೆದಿರುತ್ತೆ. ಪ್ರತಿ ಭಾನುವಾರ ರಜೆ ಇರುವ ಕಾರಣ ಈ ಹೋಟೆಲ್‌ಗೆ ವಲಸೆ ಕಾರ್ಮಿಕರು, ಸ್ಥಳೀಯರು ಬಿರಿಯಾನಿ ತಿನ್ನಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಘಮಲು ಸವಿಯಲೆಂದೇ ಇಲ್ಲಿಗೆ ಬರುತ್ತೇವೆ ಎನ್ನುತ್ತಾರೆ ದೇವನಹಳ್ಳಿಯ ಸುಷ್ಮಾ.
ಇಲ್ಲಿ ಸಿಗುವಷ್ಟು ರುಚಿ ಮತ್ತು ಗುಣಮಟ್ಟದ ಬಿರಿಯಾನಿ ಮತ್ತೆಲ್ಲೂ ಸಿಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ನಿರ್ಮಲಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.