ಆನೇಕಲ್: ತಾಲ್ಲೂಕಿನ ನರಸಪುರದ ಗ್ರಾಮದ ಶಂಕರ್ ಅವರಿಗೆ ಕೇಂದ್ರ ಗೃಹ ಇಲಾಖೆ ಗೃಹಮಂತ್ರಿ ದಕ್ಷತಾ ಪದಕ 2024 ದೊರೆತಿದೆ. ರಾಜ್ಯದ ಮೂರು ಮಂದಿ ಪೊಲೀಸರಿಗೆ ಪದಕ ಬಂದಿದ್ದು ಈ ಪೈಕಿ ಆನೇಕಲ್ ತಾಲ್ಲೂಕಿನ ಶಂಕರ್ ಪದಕಕ್ಕೆ ಭಾಜನರಾಗಿದ್ದಾರೆ.
ಶಂಕರ್ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆಂತರಿಕ ಭದ್ರತೆಗೆ ಸಂಬಂಧಪಟ್ಟ ಚಟುವಟಿಕೆ ಮತ್ತು ನಕ್ಸಲ್ ಚಟುವಟಿಕೆ ಮಾಹಿತಿ ಸಂಗ್ರಹದಲ್ಲಿ ಉತ್ತಮ ಕೆಲಸಕ್ಕಾಗಿ ಪ್ರಶಸ್ತಿ ದಕ್ಕಿದೆ.
2020ರಲ್ಲಿಯೂ ಗೃಹ ಮಂತ್ರಿ ದಕ್ಷತಾ ಪದಕಕ್ಕೆ ಶಂಕರ್ ಭಾಜನರಾಗಿದ್ದರು. ಎರಡನೇ ಬಾರಿ ಉತ್ತಮ ಮತ್ತು ದಕ್ಷ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.