ADVERTISEMENT

ದೊಡ್ಡಬಳ್ಳಾಪುರ | ಬಸ್‌ ಟೈರ್‌ ಸ್ಫೋಟ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:34 IST
Last Updated 21 ಮೇ 2024, 5:34 IST
ಬಿಎಂಟಿಸಿ ಬಸ್‌ ಮುಂದಿನ ಟೈರ್‌ ಸ್ಫೋಟಗೊಂಡಿರುವುದು  
ಬಿಎಂಟಿಸಿ ಬಸ್‌ ಮುಂದಿನ ಟೈರ್‌ ಸ್ಫೋಟಗೊಂಡಿರುವುದು     

ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿ ಹೊಸಹುಡ್ಯ ಸಮೀಪ ಸೋಮವಾರ ಬೆಳಿಗ್ಗೆ 46ನೇ ಡಿಪೊಗೆ ಸೇರಿದ್ದ ಬಿಎಂಟಿಸಿ ಬಸ್‌ ಚಲಿಸುತ್ತಿದ್ದ ವೇಳೆ ಮುಂದಿನ ಭಾಗದ ಟೈಯರ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಪ್ರಕರಣ ನಡೆದಿದೆ.

ಬಸ್‌ ಮುಂದಿನ ಭಾಗದ ಟೈರ್ ಸಾಕಷ್ಟು ಸವೆದು ಹೋಗಿದ್ದರೂ ಡಿಪೊದಲ್ಲಿನ ಮೆಕಾನಿಕ್‌ಗಳು ಟೈರ್ ಅನ್ನು ಬದಲಾವಣೆ ಮಾಡದೆ ಚಾಲನೆ ಮಾಡಲು ಅನುಮತಿ ನೀಡಿರುವುದು ಈ ಘಟನ ನಡೆಯಲು ಕಾರಣವಾಗಿದೆ. ಡಿಪೊ ವ್ಯವಸ್ಥಾಪಕ ಹಾಗೂ ಮೆಕಾನಿಕ್‌ಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿದಿನ ಡಿಪೊದಿಂದ ಹೊರ ಬರುವಾಗ ಬಸ್‌ ಸುಸ್ಥಿತಿ ಬಗ್ಗೆ ಪರಿಶೀಲನೆ ಮಾಡದೆ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸ್‌ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT