ADVERTISEMENT

ಕೊಳವೆಬಾವಿ ಕೇಬಲ್‌ ವೈರ್‌ ಕಳವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 12:48 IST
Last Updated 7 ಫೆಬ್ರುವರಿ 2023, 12:48 IST
ಕೋರಮಂಗಲ ಗ್ರಾಮದಲ್ಲಿ ರೈತರ ತೋಟಗಳಲ್ಲಿನ ಮೋಟಾರುಗಳ ಬಳಿ ಕೇಬಲ್ ಕಳವು ಮಾಡಿರುವುದು
ಕೋರಮಂಗಲ ಗ್ರಾಮದಲ್ಲಿ ರೈತರ ತೋಟಗಳಲ್ಲಿನ ಮೋಟಾರುಗಳ ಬಳಿ ಕೇಬಲ್ ಕಳವು ಮಾಡಿರುವುದು   

ವಿಜಯಪುರ(ದೇವನಹಳ್ಳಿ): ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಸುಮಾರು 10 ರೈತರ ತೋಟಗಳಲ್ಲಿನ ಕೊಳವೆಬಾವಿಗಳ ಮೋಟಾರ್‌ಗಳನ್ನು ಮೇಲೆತ್ತಿ 1760 ಅಡಿ ಉದ್ದದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೇಬಲ್ ವೈರ್‌ಗಳನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ಟಿಲ್ಲರ್‌ನಲ್ಲಿ ಅಳವಡಿಸಿದ್ದ ಪಂ‍ಪ್‌ ಹಾಗೂ ಸೋಲಾರ್ ಪ್ಯಾನಲ್ ಬೋರ್ಡ್‌ಗಳನ್ನೂ ಕಳವು ಮಾಡಿದ್ದಾರೆ. ಮಂಗಳವಾರ ಬೆಳಗಿನ ಜಾವದಲ್ಲಿ ರೈತರು ತೋಟಗಳ ಕಡೆಗೆ ಹೋಗಿದ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

₹2 ಲಕ್ಷ ಮೌಲ್ಯದ ವಸ್ತುಗಳು ಕಳತನವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದರು.

ADVERTISEMENT

ರೈತರು ಕೊಳವೆಬಾವಿ ಆಶ್ರಯಿಸಿ ಫಸಲು ಬೆಳೆಯುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಪಂಪ್‌, ಮೋಟಾರ್‌ಗಳನ್ನು ಕಳವು ಮಾಡಿರುವುದು ಅವರಲ್ಲಿ ಆತಂಕಕ್ಕೀಡು ಮಾಡಿದೆ. ಕೂಡಲೇ, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.