ಆನೇಕಲ್ : ಬನ್ನೇರುಘಟ್ಟ ರಸ್ತೆಯ ಶನಿಮಹಾತ್ಮ ದೇವಾಲಯದ ಸಮೀಪ ಕಡಲೆಕಾಯಿ ಪರಿಷೆ ನೋಡಲು ಬಂದಿದ್ದ ಎರಡು ವರ್ಷದ ಮಗು ದೇವಾಲಯದಿಂದ ಹೊರ ಬರುತ್ತಿದ್ದಂತೆ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದೆ.
ಜಿಗಣಿ ಸಮೀಪದ ಮಾದಪಟ್ಟಣದ ಏಕಾಶ್ (2) ಮೃತ ಮಗು.
ಕಡಲೆಕಾಯಿ ಪರಿಷೆಗೆ ಬಂದಿದ್ದ ತಾಯಿ–ಮಗು ದೇವಾಲಯದ ದರ್ಶನ ಮುಗಿಸಿ ಹೊರ ಬರುತ್ತಿದ್ದಂತೆ ಜನಜಂಗುಳಿಯಲ್ಲಿ ಮಗು ತಾಯಿಯ ಕೈ ಬಿಟ್ಟು ರಸ್ತೆಯಲ್ಲಿ ಸಾಗುವ ವೇಳೆ ಕಾರು ಡಿಕ್ಕಿ ಹೊಡೆದು ಮಗುವಿನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದೆ. ಕಣ್ಮಂದೆಯೇ ಮಗುವಿನ ಸಾವು ಕಂಡ ತಾಯಿಯ ರೋಧನ ಮುಗಿಲು ಮುಟ್ಟಿತ್ತು.
ಕಾರು ಚಾಲಕನನ್ನು ಆನೇಕಲ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.