ದೇವನಹಳ್ಳಿ: ವಿಶ್ವಭೂಮಿ ದಿನವನ್ನು ಪ್ರತಿಯೊಬ್ಬರು ನುಡಿ ನಮನ ಆಚರಣೆ ಹಬ್ಬವಾಗಿಸಬೇಕು ಎಂದು ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಬಿ.ಕೆ ಗೋಪಾಲ್ ಅಭಿಪ್ರಾಯಪಟ್ಟರು.
ಇಲ್ಲಿನ ನಗರದ ಕೋಟೆ ಬಡಾವಣೆಯಲ್ಲಿ ಖುಷಿ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ ಆಂಡ್ ಡಾನ್ಸ್ ಬೇಸಿಗೆ ಶಿಬಿರ ತರಬೇತಿ ಕೇಂದ್ರದಲ್ಲಿ ವಿಶ್ವಭೂಮಿ ದಿನದ ಅಂಗವಾಗಿ ಸರಸ್ವತಿ ಸಂಗೀತ ವಿದ್ಯಾಲಯದಿಂದ ಆಯೋಜಿಸಿದ್ದ ಚಿತ್ರಕಲಾ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಪರಿಸರ ಜತೆಗಿನ ಜೀವ ವೈವಿಧ್ಯತೆ ಶೇ60ರಷ್ಟು ನಾಶವಾಗಿದೆ. 1970ರಿಂದ ಈವರೆಗೆ ಶೇ60ರಷ್ಟು ಸಸ್ತನಿಗಳು, ಜಲಚರ ಜೀವಿಗಳ ನಾಶವಾಗಿವೆ. ಮಾನವ ಸ್ವಾರ್ಥಕ್ಕಾಗಿ ಪ್ರಕೃತಿ ಮೇಲೆ ನಡೆಸುತ್ತಿರುವ ಅವೈಜ್ಞಾನಿಕ ಚಟುವಟಿಕೆಗಳು ಮುಖ್ಯಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ರಕ್ಷಣೆ ಎಂದರೆ ಭೂಮಿ ರಕ್ಷಣೆ ಮಾಡುವುದು ಎಂದು ಅರ್ಥ ಮಾಡಿಕೊಳ್ಳಬೇಕು. ಸಸಿ ನೆಡುವುದು ಪಾಲನೆ ಮಾಡಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಬಿ.ಕೆ.ಶಿವಪ್ಪ ಮಾತನಾಡಿ, 1970ರಿಂದ ವಿಶ್ವಭೂಮಿ ದಿನಾಚರಣೆ ಆರಂಭಗೊಂಡಿದ್ದು,192 ದೇಶದಲ್ಲಿ ಆಚರಣೆಯಲ್ಲಿದೆ. ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿರ್ವಾಯತೆ ಇದೆ. ವನ್ಯ ಜೀವಿ ಸಂಕುಲವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದರೆ ವನ್ಯ ಜೀವಿಗಳ ಅವಾಸ ಸ್ಥಾನದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮ್ಯೂಸಿಕ್ ಅಂಡ್ ಡಾನ್ಸ್ ಸಂಸ್ಥೆ ವ್ಯವಸ್ಥಾಪಕ ಅಕ್ಷಯ್ ಶರ್ಮ, ಮುಖಂಡರಾದ ಸುಬ್ರಮಣ್ಯ, ಮಾರೇಗೌಡ ಇದ್ದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.