ADVERTISEMENT

ದಾಬಸ್ ಪೇಟೆ ಸುತ್ತ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 2:28 IST
Last Updated 18 ಮೇ 2024, 2:28 IST
ದಾಬಸ್ ಪೇಟೆ ವ್ಯಾಪ್ತಿಯಲ್ಲಿ ಶುಕ್ರವಾರ ಉತ್ತಮ ಮಳೆಯಾಯಿತು
ದಾಬಸ್ ಪೇಟೆ ವ್ಯಾಪ್ತಿಯಲ್ಲಿ ಶುಕ್ರವಾರ ಉತ್ತಮ ಮಳೆಯಾಯಿತು   

ದಾಬಸ್ ಪೇಟೆ: ಸೋಂಪುರ ಹೋಬಳಿಯ ದಾಬಸ್ ಪೇಟೆ, ಶಿವಗಂಗೆ, ನರಸೀಪುರ ಭಾಗಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ಮಧ್ಯಾಹ್ನ 12.50ರ ಸುಮಾರಿಗೆ ಆರಂಭವಾದ ಮಳೆಯು 1.50ರವರೆಗೆ ಜೋರಾಗಿ ಸುರಿಯಿತು. ಮತ್ತೆ ಸಂಜೆಯೂ ಕೆಲವು ಭಾಗಗಳಲ್ಲಿ ಮಳೆ ಆಯಿತು.

ವಾರದ ಹಿಂದೆ ಸುರಿದ ಮಳೆಯಿಂದ ಭೂಮಿ ನೆನೆದು ತಂಪಾಗಿತ್ತು. ಈಗ ಬಂದ ಮಳೆಯಿಂದ ಭೂಮಿ ಇನ್ನಷ್ಟು ನೆನೆದು ಹೊಲಗಳಲ್ಲಿ ನೀರು ಹರಿದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.