ಆನೇಕಲ್: ಪಟ್ಟಣದಲ್ಲಿ ಭಾನುವಾರ ಆವರಿಸಿದ್ದ ದಟ್ಟ ಮಂಜಿನಿಂದಾಗಿ ಪಟ್ಟಣವು ಸಂಪೂರ್ಣ ಮಂಜಿನಿಂದ ತುಂಬಿತ್ತು. ಜನತೆ ಚಳಿಯಿಂದಾಗಿ ಪರದಾಡುವ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 8ಗಂಟೆಯಾದರೂ ಸೂರ್ಯನ ದರ್ಶನವಿಲ್ಲದೇ ಚುಮು ಚುಮು ಚಳಿಯ ನಡುವೆ ರಜೆ ದಿನ ಭಾನುವಾರ ಕಳೆಯುವಂತಾಗಿತ್ತು.
ಮೈ ಕೊರೆಯುವ ಚಳಿಯಿಂದಾಗಿ ಬೆಳಗ್ಗೆ 8.30ರವರೆಗೂ ಪಟ್ಟಣದಲ್ಲಿ ಜನರ ಓಡಾಟ ಕಡಿಮೆಯಿತ್ತು. ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ವಾಯುವಿಹಾರ, ಜಾಗಿಂಗ್ ಮಾಡುವವರು ಸಂಖ್ಯೆ ವಿರಳವಾಗಿತ್ತು. ದಟ್ಟ ಮಂಜಿನ ವಾತಾವರಣದ ನಡುವೆಯೂ ವಿದ್ಯಾರ್ಥಿಗಳು, ಯುವಕರು ಕ್ರಿಕೆಟ್, ಫುಟ್‌ಬಾಲ್ ಆಡುವುದರಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂದಿತು.
ಎಎಸ್‌ಬಿ ಮೈದಾನದಲ್ಲಿ ಪುಟಾಣಿಗಳು ಮಂಜಿನ ನಡುವೆಯೂ ಕರಾಟೆ ಅಭ್ಯಾಸ ಮಾಡುತ್ತಿದ್ದರು.
ಭಾನುವಾರ ಪಟ್ಟಣದ ಪ್ರಮುಖ ರಸ್ತೆಗಳು ಮಂಜು ಕವಿದ ವಾತಾವರಣದಿಂದಾಗಿ ಮಬ್ಬಾಗಿತ್ತು. ಬೆಳಗ್ಗೆ ಸುಮಾರು 8.30ರವರೆಗೂ ಮಂಜಿನ ವಾತಾವರಣವಿತ್ತು. ಬೆಳಗಾದರೂ ರಸ್ತೆ ಕಾಣದಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.