ADVERTISEMENT

ದೇವನಹಳ್ಳಿ | 'ಕೆಂಪೇಗೌಡ ದೂರದೃಷ್ಟಿ ನಾಯಕ'

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 13:19 IST
Last Updated 27 ಜೂನ್ 2024, 13:19 IST
ವಿಜಯಪುರದಲ್ಲಿ ಪುರಸಭೆ ಸಭಾಂಗಣದಲ್ಲಿ ಗುರುವಾರ ಕೆಂಪೇಗೌಡ ಜಯಂತಿ ಆಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ವಿಜಯಪುರದಲ್ಲಿ ಪುರಸಭೆ ಸಭಾಂಗಣದಲ್ಲಿ ಗುರುವಾರ ಕೆಂಪೇಗೌಡ ಜಯಂತಿ ಆಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು   

ವಿಜಯಪುರ(ದೇವನಹಳ್ಳಿ): ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಕೆಂಪೇಗೌಡರ 515ನೇ ಜಯಂತಿ ಆಚರಣೆ ನಡೆಯಿತು. ಒಕ್ಕಲಿಗ ಸಮುದಾಯದ ಮುಖಂಡರು‌ ಹಾಗೂ ಪುರಸಭೆ ಅಧಿಕಾರಿಗಳು, ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. 

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಆಡಳಿತ ವ್ಯವಸ್ಥೆ ಕಾರ್ಯವೈಖರಿ ಹೇಗಿರಬೇಕು. ಈ ನಾಡನ್ನು ಹೇಗೆ ಕಟ್ಟಬೇಕು. ಎನ್ನುವ ಬಗ್ಗೆ ಕೆಂಪೇಗೌಡ ಸ್ವತಃ ಆಳ್ವಿಕೆ ಮಾಡುವ ಮೂಲಕ ಮಾದರಿ ಆಗಿದ್ದಾರೆ.  ಅವರು ಒಂದು ಸಮುದಾಯಕ್ಕೆ ಸೀಮಿತವಾಗಿರುವ ನಾಯಕರಲ್ಲ. ಅವರು ನಮ್ಮೆಲ್ಲರ ಆಸ್ತಿಯಾಗಬೇಕು. ಅವರು ಸ್ಥಾಪನೆ ಮಾಡಿರುವ ಬೆಂಗಳೂರು ವಿಶ್ವದ ಎಲ್ಲ ದೇಶಗಳ ಜನರಿಗೆ ಆಶ್ರಯ ನೀಡಿದೆ. ಅವರ ಆದರ್ಶ ಮೈಗೂಡಿಸಿಕೊಂಡು ನಾವೆಲ್ಲರೂ ಸಾಗಬೇಕು ಎಂದರು.

ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಕೆಂಪೇಗೌಡ ಆಡಳಿತಾತ್ಮಕ ಕೌಶಲಗಳಿಗೆ ಹೆಸರುವಾಸಿಯಾಗಿದ್ದರು. ಬೆಂಗಳೂರು ಕಟ್ಟಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಂತನಾಗಿದ್ದ ಅವರು, ಕಟ್ಟಿದ ಬೆಂಗಳೂರು ಜಗತ್ತಿನ ಗಮನ ಸೆಳೆದಿದೆ. ಅವರು ಕಟ್ಟಿದ ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳು ಅಭಿವೃದ್ಧಿಯಾಗಿವೆ. ಅನೇಕ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೋಟೆಗಳು ಇಂದಿಗೂ ಗಮನ ಸೆಳೆಯುತ್ತಿವೆ. ಕೃಷಿ, ಶಿಕ್ಷಣ, ಎಂಜಿನಿಯರ್, ವಾಣಿಜ್ಯೋದ್ಯಮ, ವೈದ್ಯ, ತಂತ್ರಜ್ಞಾನಿ, ದಾರ್ಶನಿಕ, ಸಂತನಾಗಿ ಬೆಳೆದಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ADVERTISEMENT

ಒಕ್ಕಲಿಗ ಸಮುದಾಯದ ಮುಖಂಡ ಎಂ.ವೀರಣ್ಣ ಮಾತನಾಡಿ, ಕೆಂಪೇಗೌಡ ಉತ್ತಮ ಆಡಳಿತಗಾರರು ಮಾತ್ರವಲ್ಲದೆ ಯುದ್ಧಕಲೆಯಲ್ಲಿ ಪರಿಣಿತಿ ಪಡೆದಿದ್ದರು. ಅವರು ಹಾಕಿ ಕೊಟ್ಟಿರುವ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕಾಗಿದೆ. ಅವರೊಬ್ಬರ ದೂರದೃಷ್ಟಿ ನಾಯಕರಾಗಿದ್ದು, ಅವರ ಕಾಲದಲ್ಲಿ ಎಲ್ಲ ಸಮುದಾಯಗಳಿಗೂ ಅವರವರ ಕಸುಬಿಗೆ ಅನುಗುಣವಾಗಿ ಒಂದೊಂದು ಪೇಟೆ ನಿರ್ಮಾಣ ಮಾಡಿಕೊಟ್ಟಿರುವುದು ಇದಕ್ಕೆ ನಿದರ್ಶನ ಎಂದರು.

ಪುರಸಭೆ ಸದಸ್ಯ ಬೈರೇಗೌಡ ಮಾತನಾಡಿ, ಕೆಂಪೇಗೌಡರು, ಎಲ್ಲ ಕಸುಬುದಾರರಿಗೆ ಒಂದೊಂದು ಪೇಟೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ, ಒಕ್ಕಲುತನ ಮಾಡುವ ಒಕ್ಕಲಿಗರಿಗೆ ಪ್ರತ್ಯೇಕವಾಗಿ ಪೇಟೆ ಕಟ್ಟಲಿಲ್ಲ. ಬದಲಿಗೆ ಒಕ್ಕಲಿಗರು ಎಲ್ಲರನ್ನೂ ಸಲಹುವವರನ್ನಾಗಿ ಮಾಡಿದ್ದಾರೆ. ಎಲ್ಲರಿಗೂ ಅನ್ನಕೊಡುವುದು ನಮ್ಮ ಕಾಯಕ ಎಂದರು.

ಪುರಸಭೆ ಸದಸ್ಯರಾದ ಸಿ.ನಾರಾಯಣಸ್ವಾಮಿ, ರವಿ, ಎಂ.ಕೇಶವಪ್ಪ, ಎ.ಆರ್.ಹನೀಪುಲ್ಲಾ, ಸಿ.ಎಂ.ರಾಮು, ಎಂ.ರಾಜಣ್ಣ, ಶ್ರೀರಾಮಪ್ಪ, ಮುಖಂಡರಾದ ಪ್ರಕಾಶ್, ಮಹಬೂಬ್ ಪಾಷ, ಸೈಪುಲ್ಲಾ, ಒಕ್ಕಲಿಗರ ಸಂಘದ ಅಧ್ಯಕ್ಷ ಬಚ್ಚೇಗೌಡ, ವಿ.ಎಂ.ನಾಗರಾಜ್, ವೆಂಕಟೇಶ್, ಮಹೇಶ್ ಕುಮಾರ್, ಮುನಿರಾಜು, ತೋಟದಪ್ಪ, ಮಂಜುನಾಥ್, ರಾಘವೇಂದ್ರ, ಕಿರಣ್, ಅಧಿಕಾರಿಗಳಾದ ಶಿವನಾಗೇಗೌಡ, ಲಿಂಗಣ್ಣ, ಎಂಜಿನಿಯರ್ ಶೇಖರ್, ಸುನೀಲ್, ಪವನ್ ಜ್ಯೋಷಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.