ADVERTISEMENT

ಕ್ರಿಕೆಟ್ ಟೂರ್ನಿ | ದೇವನಹಳ್ಳಿ ಕಾಲೇಜು ತಂಡಕ್ಕೆ ಜಯ

ಚಂದೇನಹಳ್ಳಿಯಲ್ಲಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 14:31 IST
Last Updated 10 ಜೂನ್ 2024, 14:31 IST
ವಿಜಯಪುರ ಹೋಬಳಿ ಚಂದೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್ ಬಹುಮಾನ, ನಗದು ವಿತರಣೆ ಮಾಡಿದರು.
ವಿಜಯಪುರ ಹೋಬಳಿ ಚಂದೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್ ಬಹುಮಾನ, ನಗದು ವಿತರಣೆ ಮಾಡಿದರು.   

ವಿಜಯಪುರ(ದೇವನಹಳ್ಳಿ): ಹೋಬಳಿಯ ಚಂದೇನಹಳ್ಳಿಯಲ್ಲಿ ಸೋಮವಾರ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ‌ ಪೈನಲ್‌ನಲ್ಲಿ ಚಂದೇನಹಳ್ಳಿ ರಾಯಲ್ ಚಾಲೆಂಜರ್ಸ್ ಬಾಯ್ಸ್ ತಂಡವನ್ನು ಸೋಲಿಸಿ ದೇವನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಜಯ ಸಾಧಿಸಿತು.

ವಿಜೇತ ತಂಡಕ್ಕೆ ಆಕರ್ಷಕ ಟ್ರೋಪಿ, ₹20 ಸಾವಿರ ನಗದು, ರನ್ನರ್‌ ಅಪ್‌ ತಂಡಕ್ಕೆ ಟ್ರೋಪಿ ಹಾಗೂ ₹10 ಸಾವಿರ ನಗದು ಬಹುಮಾನ ನೀಡಲಾಯಿತು. ತೃತೀಯ ಸ್ಥಾನ ಪಡೆದ ಭಕ್ತರಹಳ್ಳಿಯ ಯುವಕರ ತಂಡಕ್ಕೆ ₹2 ಸಾವಿರ ನಗದು ಮತ್ತು ಟ್ರೋಪಿ ನೀಡಲಾಯಿತು.

ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಗದೀಶ್ ಅವರು ವಿಜೇತ ತಂಡಗಳಿಗೆ ಟ್ರೋಪಿ ಮತ್ತು ನಗದು ವಿತರಣೆ ಮಾಡಿದರು.

ADVERTISEMENT

ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 30 ತಂಡಗಳು ಭಾಗವಹಿಸಿದ್ದವು.

ಕೊಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಮಾಜಿ ಸದಸ್ಯ ಗೋವಿಂದರಾಜು, ವಿನಯ್, ಕರ್ನಾಟಕ ದಲಿತ ಜನಸೇನೆ ರಾಜ್ಯ ಘಟಕದ ಅಧ್ಯಕ್ಷ ಟಿ.ಭರತ್, ಮುನೇಗೌಡ, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.