ADVERTISEMENT

ಪ್ರಯಾಣಿಕನ ಸೂಟ್‌ಕೇಸ್‌ನಲ್ಲಿ ಹತ್ತು ಅನಕೊಂಡ ಮರಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 21:31 IST
Last Updated 22 ಏಪ್ರಿಲ್ 2024, 21:31 IST
   

ದೇವನಹಳ್ಳಿ: ಬ್ಯಾಂಕಾಕ್‌ನಿಂದ ಹತ್ತು ಜೀವಂತ ಅನಕೊಂಡ (ದೊಡ್ಡ ಗಾತ್ರದ ಹೆಬ್ಬಾವು) ಮರಿಗಳನ್ನು ಕಳ್ಳತನದಿಂದ ತಂದಿದ್ದ ಪ್ರಯಾಣಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಕಸ್ಟಮ್ಸ್‌ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ.

ವಿಮಾನ ನಿಲ್ದಾಣದಿಂದ ಹೊರ ಹೋಗುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ಸೂಟ್‌ಕೇಸ್‌ ಪರಿಶೀಲಿಸಿದಾಗ ಬಿಳಿ ಚೀಲದಲ್ಲಿ ತಂದಿದ್ದ ಹತ್ತು ಜೀವಂತ ಹಾವು ಪತ್ತೆಯಾಗಿವೆ.

ಪ್ರಯಾಣಿಕನನ್ನು ಬಂಧಿಸಿ, ಹಾವಿನ ಮರಿಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯ ಜೀವಿಗಳ ಕಳ್ಳಸಾಗಣೆ ನಿಷೇಧ ಕಾಯಿದೆ ಮತ್ತು ಕಸ್ಟಮ್ಸ್‌ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT
ಸೂಟ್‌ಕೇಸ್ ನಲ್ಲಿ ಬಚ್ಚಿಟ್ಟಿರುವ ಅನಕೊಂಡ ಹಾವುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.