ADVERTISEMENT

ದೇವನಹಳ್ಳಿ | ಪ್ರಯಾಣಿಕನ ಹೊಟ್ಟೆಯಲ್ಲಿತ್ತು ₹9.20 ಕೋಟಿ ಮೌಲ್ಯದ ಕೊಕೇನ್!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 8:56 IST
Last Updated 17 ಫೆಬ್ರುವರಿ 2024, 8:56 IST

ದೇವನಹಳ್ಳಿ: ದುಬೈನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೆನೆಜುವೆಲಾದ ಪ್ರಜೆ ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಂಡಿದ್ದ 920 ಗ್ರಾಂ ಕೊಕೇನ್‌ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.

ಮಾರುಕಟ್ಟೆಯಲ್ಲಿ 920 ಗ್ರಾಂ ಕೊಕೇನ್‌ ಮೌಲ್ಯ ₹9.20 ಕೋಟಿಗಳಾಗುತ್ತದೆ ಎಂದು ಅಂದಾಜಿಸಲಾಗಿದೆ. 

ಕ್ಯಾಪ್ಸೂಲ್‌ಗಳಲ್ಲಿ (ಮಾತ್ರೆ) ಕೊಕೇನ್‌ ತುಂಬಿ, ನುಂಗಿದ್ದ ಪ್ರಯಾಣಿಕನ ಚಲನವಲನಗಳಿಂದ ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು ಆತನನ್ನು ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಕ್ಯಾಪ್ಸೂಲ್‌ಗಳು ಇರುವುದು ಕಂಡುಬಂತು. ಆತನನ್ನು ಬಂಧಿಸಿ, ಮಾದಕ ವಸ್ತುಗಳ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.