ವಿಜಯಪುರ(ದೇವನಹಳ್ಳಿ): ಆಷಾಢ ಮಾಸ ಮುಗಿದು ಶ್ರಾವಣ ಮಾಸ ಆರಂಭವಾಗಿದ್ದು, ಮೊದಲ ಹಬ್ಬ ವರಮಹಾಲಕ್ಷ್ಮಿ ವ್ರತಕ್ಕಿಂತ ಮೊದಲೇ ಹಣ್ಣುಗಳ ಬೆಲೆ ದುಬಾರಿಯಾಗಿವೆ.
ಹಬ್ಬದ ದಿನಕ್ಕೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಏರಿಕೆ ಹಾದಿಯಲ್ಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಕೆ.ಜಿ ಸೇಬು ₹200 ಇದ್ದದ್ದು, ಈಗ ₹240ಕ್ಕೆ ಏರಿಕೆಯಾಗಿದೆ. ದಾಳಿಂಬೆ ₹190ರಿಂದ ₹230ಕ್ಕ, ಮೂಸಂಬಿ ₹70ರಿಂದ ₹100, ಕಿತ್ತಳೆ ₹100ರಿಂದ ₹150, ಬಾಳೇಹಣ್ಣು ₹60ರಿಂದ ₹90ಕ್ಕೆ ಏರಿಕೆಯಾಇದೆ. ಫೈನಾಪಲ್ ಒಂದು ಕಾಯಿಗೆ ₹50ರಿಂದ ₹80, ಪಪ್ಪಾಯ ಕೆ.ಜಿಗೆ ₹50 ಆಗಿದೆ.
ಆಷಾಢ ಮಾಸದಲ್ಲಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಹಣ್ಣುಗಳ ಬೆಲೆ ಕೇಳಿ ಗಾಬರಿಯಾಯಿತು. ಒಂದು ವಾರದಲ್ಲಿ ಇಷ್ಟೊಂದು ಬೆಲೆ ಏರಿಕೆಯಾಗಿದೆಯೇ ಎಂದು ಆಶ್ಚರ್ಯವಾಯಿತು. ವೈದ್ಯರು, ಹಣ್ಣುಗಳು, ಸೊಪ್ಪು, ತರಕಾರಿಗಳು ಹೆಚ್ಚಾಗಿ ಸೇವಿಸಿ ಎಂದು ಸಲಹೆ ನೀಡಿದ್ದಾರೆ. ಹಣ್ಣು ಖರೀದಿಗೆ ₹2 ಸಾವಿರ ಖರ್ಚು ಆಗುತ್ತಿದೆ ಎಂದು ಗ್ರಾಹಕ ಮುನಿರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.