ADVERTISEMENT

ಪತಂಗದ ಬೆನ್ನು ಹತ್ತಿ...

ರಾಷ್ಟ್ರೀಯ ಪತಂಗವಾರ ನಿಮಿತ್ತ; ಅಧ್ಯಯನ

ನಟರಾಜ ನಾಗಸಂದ್ರ
Published 28 ಜುಲೈ 2024, 5:01 IST
Last Updated 28 ಜುಲೈ 2024, 5:01 IST
ಪತಂಗಗಳ ಅಧ್ಯಯನಕ್ಕಾಗಿ ರಾತ್ರಿ ವೇಳೆ ಮಾತ್‌ ಸ್ಕ್ರೀನಿಂಗ್‌ ನಡೆಸುತ್ತಿರುವುದು
ಪತಂಗಗಳ ಅಧ್ಯಯನಕ್ಕಾಗಿ ರಾತ್ರಿ ವೇಳೆ ಮಾತ್‌ ಸ್ಕ್ರೀನಿಂಗ್‌ ನಡೆಸುತ್ತಿರುವುದು   

ದೊಡ್ಡಬಳ್ಳಾಪುರ:  ರಾಷ್ಟ್ರೀಯ ಪತಂಗ ವಾರ ನಿಮಿತ್ತ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪತಂಗ ಆಸಕ್ತರ ತಂಡ ವೈಜ್ಞಾನಿಕ ಅಧ್ಯಯನ ಮತ್ತು ದಾಖಲಾತಿ ನಡೆಸುತ್ತಿದೆ.

2012ರಲ್ಲಿ ಆರಂಭವಾದ ರಾಷ್ಟ್ರೀಯ ಪತಂಗ ವಾರವನ್ನು ವಿಶ್ವದ 90ಕ್ಕೂ ಹೆಚ್ಚಿನ ದೇಶಗಳಲ್ಲಿ ಆಸಕ್ತರು, ಸಂಘ–ಸಂಸ್ಥೆಗಳು ಆಚರಿಸುತ್ತಿವೆ.

ಪತಂಗಗಳನ್ನು ಗಮನಿಸುವ ಮತ್ತು ಅರಿವು ಮೂಡಿಸುವ ಮೂಲಕ ಜುಲೈ 20ರಿಂದ 28 ವರೆಗೆ ಪತಂಗ ವಾರ ಆಚರಿಸಲಾಗುತ್ತದೆ. ಅದೇ ರೀತಿ ಚಟುವಟಿಕೆ ದೊಡ್ಡಬಳ್ಳಾಪುರದಲ್ಲೂ ನಡೆಯುತ್ತಿದೆ.

ADVERTISEMENT

ಭೂಮಿಯ ಮೇಲೆ ಚಿಟ್ಟೆಗಳಿಗಿಂತ ಮೊದಲೇ ಪತಂಗ ವಿಕಾಸಗೊಂಡವು. ಆದರೂ ಚಿಟ್ಟೆಗಳಷ್ಟು ಪತಂಗ ಜನರ ಗಮನ ಸೆಳೆದಿಲ್ಲ. ಇದಕ್ಕೆ ಕಾರಣ ಹೆಚ್ಚಿನ ಪತಂಗ ಪ್ರಭೇದ ನಿಶಾಚರಿ. ಇವುಗಳ ಬಣ್ಣ ಮತ್ತು ವಿನ್ಯಾಸ ಆಕರ್ಷಕವಾಗಿದ್ದರೂ ಪರಿಸರದಲ್ಲಿ ಚಿಟ್ಟೆಗಳಂತೆ ಎದ್ದು ಕಾಣುವುದಿಲ್ಲ. ಈ ಕಾರಣಗಳಿಂದಲೇ ಪತಂಗ ಅಧ್ಯಯನಗಳು ಕಡಿಮೆ. ಚಿಟ್ಟೆ ಛಾಯಾಚಿತ್ರಗಳಷ್ಟು ಪತಂಗ ಛಾಯಾಚಿತ್ರಗಳ ದಾಖಲೆ ಕಡಿಮೆ ಎನ್ನುತ್ತಾರೆ ಪತಂಗಳ ಕುರಿತು ವಿಶೇಷ ಅಧ್ಯಯನ ನಡೆಸುತ್ತಿರುವ ಛಾಯಾಚಿತ್ರಗಾರ ವೈ.ಟಿ.ಲೋಹಿತ್‌.

ಮರ್ಕ್ಯುರಿ ಲೈಟ್ ಮತ್ತು ಬಿಳಿ ಬಟ್ಟೆ ಬಳಸಿ ಪತಂಗ ಆಕರ್ಷಿಸಬಹುದು ಮತ್ತು ಆ ಪ್ರದೇಶದಲ್ಲಿರುವ ಪತಂಗ ಪ್ರಭೇದಗಳನ್ನು ದಾಖಲಿಸಬಹುದು. ಈ ಮಾದರಿಯನ್ನು ಬಳಸಿ ದೊಡ್ಡಬಳ್ಳಾಪು‌ರ ಭಾಗದಲ್ಲಿ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ಕಾರಣಗಳಿಂದ ಪತಂಗ ಸಂತತಿ ಕ್ಷೀಣಿಸುತ್ತಿದ್ದು, ಇದರಿಂದ ಬೆಳೆ ಇಳುವರಿ ಕುಂಟಿತ, ಕೀಟ ಪ್ರಪಂಚದ ಜೀವ ಸರಪಣಿಯು ಸಡಿಲವಾಗುತ್ತಿದೆ. ಪರಿಸರದ ಉಳುವಿಗೆ ಪತಂಗಗಳ ಪಾತ್ರ ಮಹತ್ವದ್ದಾಗಿದೆ. ಇವುಗಳ ಸಂತತಿ  ಬೆಳವಣಿಗೆಗೆ ಅಗತ್ಯ ವಾತಾವರಣ ಸೃಷ್ಟಿಯಾಗಬೇಕು ಎನ್ನುತ್ತಾರೆ ಲೋಹಿತ್‌.

ಪತಂಗಗಳ ಅಧ್ಯಯನಕ್ಕಾಗಿ ರಾತ್ರಿ ವೇಳೆ ಮಾತ್‌ ಸ್ಕ್ರೀನಿಂಗ್‌ ನಡೆಸುತ್ತಿರುವುದು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು
ವಿವಿಧ ಜಾತಿ ಹಾಗೂ ಬಣ್ಣದ ಪತಂಗಗಳು

ವೈವಿಧ್ಯಮಯ ಪತಂಗ ಮತ್ತು ಚಿಟ್ಟೆಗಳೆರಡು ಒಂದೇ ಗುಂಪಿಗೆ ಸೇರಿದ ಕೀಟಗಳಾದರೂ ಎರಡರ ಉಪ ಗುಂಪು ಬೇರೆ. ಭೂಮಿಯ ಮೇಲೆ ಸುಮಾರು 140000 ಪತಂಗದ ಪ್ರಭೇದಗಳಿದ್ದು 18000 ಚಿಟ್ಟೆ ಪ್ರಭೇದಗಳಿವೆ. ದೇಶದಲ್ಲಿ 12000 ಪತಂಗದ ಪ್ರಭೇದ ಮತ್ತು 1400 ಚಿಟ್ಟೆಯ ಪ್ರಭೇದಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.