ದೊಡ್ಡಬಳ್ಳಾಪುರ: ನಗರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ನಿಧಿಯಿಂದ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ವಿಜೇತ ವಿದ್ಯಾರ್ಥಿಗಳು
ಪ್ರಥಮ ಪಿಯುಸಿ ವಿಭಾಗ: ಕನ್ನಡ ಪ್ರಬಂಧ: ಜಿ.ಜೆ. ಹರ್ಷಿತಾ ನೆಲಮಂಗಲ. ಆಂಗ್ಲ ಭಾಷಾ ಪ್ರಬಂಧ: ನಂದಿತಾ, ಪ್ರಗತಿ ಕಾಲೇಜು ವಿಜಯಪುರ. ಕನ್ನಡ ಚರ್ಚಾ ಸ್ಪರ್ಧೆ: ಎಂ.ಪವಿತ್ರ ಪ್ರಗತಿ ಕಾಲೇಜು ವಿಜಯಪುರ. ಆಂಗ್ಲ ಚರ್ಚಾ ಸ್ಪರ್ಧೆ: ಎಂ.ದೀಕ್ಷಿತಾ ಪ್ರಗತಿ ಕಾಲೇಜು ವಿಜಯಪುರ. ಭಕ್ತಿಗೀತೆ: ಎಂ.ಲೋಹಿತ್ ಶ್ರೀಕೊಂಗಾಡಿಯಪ್ಪ ಕಾಲೇಜು ದೊಡ್ಡಬಳ್ಳಾಪುರ. ಆಶು ಭಾಷಣ: ಆರ್.ಎಂ. ತೇಜಶ್ರೀ,ಶ್ರೀ ವಾಣಿ ಕಾಲೇಜು ದೊಡ್ಡಬಳ್ಳಾಪುರ. ಚಿತ್ರಕಲೆ: ಆರ್.ರಚನಾ ಆವತಿ. ಜಾನಪದ ಗೀತೆ: ಪಿ.ಅಮಿತಾ, ಹೊಯ್ಸಳ ಕಾಲೇಜು ನೆಲಮಂಗಲ. ಭಾವಗೀತೆ: ಇಂಚರ ಹೊಸಕೋಟೆ. ಏಕಪಾತ್ರಾಭಿನಯ: ಕೆ.ಪೃಥ್ವಿ, ಶ್ರೀವಾಣಿ ಕಾಲೇಜು ದೊಡ್ಡಬಳ್ಳಾಪುರ.ರಸಪ್ರಶ್ನೆ:ವಿ.ಮಂಥನ್ ಮತ್ತು ಆರ್.ಶಶಾಂಕ್ ನೆಲಮಂಗಲ.
ದ್ವಿತೀಯ ಪಿಯುಸಿ ವಿಭಾಗ: ಕನ್ನಡ ಪ್ರಬಂಧ: ಜಿ.ಎಂ. ಲಕ್ಷ್ಮೀ, ಬಾಲಕಿಯರ ಕಾಲೇಜು ಹೊಸಕೋಟೆ. ಆಂಗ್ಲ ಪ್ರಬಂಧ: ವಿ.ಮನ್ವಿತಾ, ಶ್ರೀ ವಾಣಿ ಕಾಲೇಜು ದೊಡ್ಡಬಳ್ಳಾಪುರ. ಕನ್ನಡ ಚರ್ಚಾಸ್ಪರ್ಧೆ:ಎಂ.ಮೀನಾ, ಶ್ರೀ ಕೊಂಗಾಡಿಯಪ್ಪ ಕಾಲೇಜು ದೊಡ್ಡಬಳ್ಳಾಪುರ. ಆಂಗ್ಲಚರ್ಚಾ ಸ್ಪರ್ಧೆ: ಆರ್.ಜೀವಿತಾ, ಪ್ರಗತಿ ಕಾಲೇಜು ವಿಜಯಪುರ. ಭಕ್ತಿ ಗೀತೆ: ಪ್ರಜ್ಞಾ, ಮಹಾದೇವ ಕಾಲೇಜು ಹೊಸಕೋಟೆ. ಆಶುಭಾಷಣ: ಎಸ್. ಆರ್. ಚೈತ್ರಾಂಜಲಿ ನೆಲಮಂಗಲ. ಚಿತ್ರಕಲೆ: ಉಮ್ರಾ ಪಾತಿಮಾ, ಬಾಪೂಜಿ ಕಾಲೇಜು ಹೊಸಕೋಟೆ. ಭಾವಗೀತೆ: ಎಸ್.ಐಶ್ವರ್ಯ, ಶ್ರೀಕೊಂಗಾಡಿಯಪ್ಪ ಕಾಲೇಜು ದೊಡ್ಡಬಳ್ಳಾಪುರ. ಜನಪದಗೀತೆ: ಅಕ್ಷತಾ ಟಿ.ನಾಯಕ್ ಶ್ರೀವಾಣಿ ಕಾಲೇಜು ದೊಡ್ಡಬಳ್ಳಾಪುರ. ಏಕಪಾತ್ರಾಭಿನಯ: ಎಲ್.ಆಶಾ, ವಿದ್ಯಾನಿಧಿ ಕಾಲೇಜು ದೊಡ್ಡಬಳ್ಳಾಪುರ. ರಸಪ್ರಶ್ನೆ: ಜಿ.ಆರ್. ಯತೀಶ್, ಆರ್. ಪಲ್ಲವಿ, ಹೊಯ್ಸಳ ಕಾಲೇಜು ನೆಲಮಂಗಲ.
ಶಾಸಕ ಧೀರಜ್ ಮುನಿರಾಜು ಬಹುಮಾನ ವಿತರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಸಮಾರೋಪ ಭಾಷಣ ಮಾಡಿದರು.
ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಎನ.ಮೋಹನ್‌ಕುಮಾರ್, ಪ್ರಾಂಶುಪಾಲರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಮೋದ್ ಡಿ.ಕುಲಕರ್ಣಿ, ಕೊಂಗಾಡಿಯೊಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ರಾಮಶೆಟ್ಟಿ, ಕಾರ್ಯದರ್ಶಿ ಎಸ್.ಪ್ರಕಾಶ್,ನಿರ್ದೇಶಕ ಜೆ.ಬಿ.ಮಹೇಶ್, ಎಸ್.ರಾಜಲಕ್ಷ್ಮಿ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆನಂದಮೂರ್ತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಸುನೀತಾ, ಮಹಾಂತೇಶ, ಬಿ.ಆರ್.ವೇಣುಗೋಪಾಲ್, ಎಂ.ಸಿ.ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.