ADVERTISEMENT

ಪರಿಸರ ಸಂರಕ್ಷಣೆ ಒಕ್ಕೂಟ ಅಸ್ತಿತ್ವಕ್ಕೆ: ಚಿಂತಕ ಜನಾರ್ಧನ ಕೆಸರಗದ್ದೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:47 IST
Last Updated 20 ನವೆಂಬರ್ 2024, 15:47 IST
ದೊಡ್ಡಬಳ್ಳಾಪುರದ ಯುವ ಸಂಚಲನ ಚಾರಿಟಬಲ್‌ ಟ್ರಸ್ಟ್‌ ಹಾಗೂ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಲೇಖಕಿ ಕೆ.ಎಸ್‌.ಪ್ರಭಾ, ಸಂವಾದದ ಯುವ ತರಬೇತುದಾರರಾದ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು
ದೊಡ್ಡಬಳ್ಳಾಪುರದ ಯುವ ಸಂಚಲನ ಚಾರಿಟಬಲ್‌ ಟ್ರಸ್ಟ್‌ ಹಾಗೂ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಲೇಖಕಿ ಕೆ.ಎಸ್‌.ಪ್ರಭಾ, ಸಂವಾದದ ಯುವ ತರಬೇತುದಾರರಾದ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು   

ದೊಡ್ಡಬಳ್ಳಾಪುರ:  ಪರಿಸರ ಸಂರಕ್ಷಣೆಯ ಹೊಣೆ ಎಲ್ಲರ ಮೇಲಿದೆ. ದೊಡ್ಡ ಮಟ್ಟದಲ್ಲಿ ಸಂಘಟನೆ ಅಗತ್ಯವಾಗಿರುವ ಹಿನ್ನೆನೆಯಲ್ಲಿ ರಾಜ್ಯ ಮಟ್ಟದಲ್ಲಿ ಪರಿಸರ ಸಂರಕ್ಷಣಗಾಗಿ ವಿವಿಧ ಸಂಘಟನೆಗಳ ಒಕ್ಕೂಟ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ರಾಜ್ಯ ವಿವಿಧ ಭಾಗಗಳಲ್ಲಿ ಪರಿಸರ ಆಸಕ್ತ ಸಂಘಟನೆಗಳ ಸಭೆಗಳನ್ನು ನಡೆಸಲಾಗಿದೆ ಎಂದು ಚಿಂತಕ ಜನಾರ್ಧನ ಕೆಸರಗದ್ದೆ ಹೇಳಿದರು.

ನಗರದ ಕಲ್ಲುಪೇಟೆಯಲ್ಲಿ ಯುವ ಸಂಚಲನ ಚಾರಿಟಬಲ್‌ ಟ್ರಸ್ಟ್‌ನ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಸಮಾಜ ಸ್ಥಬ್ದವಾದರೆ ಸಮಾಜಕ್ಕೆ ಪೂರಕವಾದ ಯೋಜನೆ, ಆಲೋಚನೆಗಳು ಸಹ ಬದಲಾಗುತ್ತವೆ. ಈ ನಿಟ್ಟಿನಲ್ಲಿ ಸಮಾಜ ಕ್ರಿಯಾಶೀಲರಾಗಿರಬೇಕು. ಇಂದಿನ ಯುವ ಜನತೆ ದುಶ್ಚಟಗಳಿಗೆ ಒಳಗಾಗಿ ಹಾಳಾಗುತ್ತಿದ್ದಾರೆ ಎನ್ನುವ ಆರೋಪವಿದೆ. ಆದರೆ ಯುವಜನರಿಗೆ ಉತ್ತೇಜನ ನೀಡಿ, ಅವರನ್ನು ಕ್ರಿಯಾಶೀಲಗೊಳಿಸುವುದು ಸಮುದಾಯದ ಹೊಣೆಗಾರಿಕೆಯೂ ಆಗಿದೆ. ಪರಿಸರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಯುವ ಸಂಚಲನದ ಪಾತ್ರ ಅಭಿನಂದನೀಯ ಎಂದರು.

ADVERTISEMENT

ಟಿ.ಡಿ.ವಿಶ್ವವಿದ್ಯಾನಿಯಲದ ಪ್ರಾಧ್ಯಾಪಕ ಅಬ್ದುಲ್‌ ಕರೀಂ ಮಾತನಾಡಿ, ‘ನಾವು ಸಕ್ರಿಯವಾಗದೇ ಇದ್ದರೆ ಇನ್ನು ಹತು ಹದಿನೈದು ವರ್ಷಗಳಲ್ಲಿ ಸ್ಥಳೀಯ ಪರಂಪರೆಗಳು ಮರೆಯಾಗಲಿವೆ. ನಮ್ಮ ಆಹಾರ ಪದ್ದತಿಗಳು,ಆರೋಗ್ಯ, ಪರಿಸರದ ವಿಚಾರಗಳು ದಾಖಲೀಕರಣಗೊಳ್ಳಬೇಕು. ಇಂದಿನ ಪೀಳಿಗೆಯನ್ನು ಜಾಗೃತಗೊಳಿಸುವ ಅಗತ್ಯವಿದೆ ಎಂದರು.

ಸಸ್ಯ ವಿಜ್ಞಾನಿ ಆರ್‌.ಜಿ.ಗಣೇಶನ್‌ ಮಾತನಾಡಿ, ‘ಅಪಾರ ಜೀವ ವೈವಿದ್ಯಗಳು ನಮ್ಮ ಸುತ್ತಮುತ್ತಲ್ಲೇ ಇದ್ದರೂ ನಾವು ಅದರ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಿಲ್ಲ. ಪ್ರಕೃತಿಯ ವಿನಾಶ ಆತಂಕಕಾರಿಯಾಗಿದೆ. ನಮ್ಮ ಸುತ್ತಲಿನ ಪ್ರಾಣಿಗಳು ಸಸ್ಯ ಸಂಕುಲದ ಬಗ್ಗೆ ಕನಿಷ್ಠ ಮಾಹಿತಿ ತಿಳಿದಿರಬೇಕು’ ಎಂದರು.

ಯುವ ಸಂಚಲನ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಚಿದಾನಂದಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಲೇಖಕಿ ಕೆ.ಎಸ್‌.ಪ್ರಭಾ,ಸಂವಾದದ ಯುವ ತರಬೇತುದಾರರಾದ ಆರ್‌.ರಾಮಕ್ಕ ಅವರನ್ನು ಸನ್ಮಾನಿಸಲಾಯಿತು.

ಸಹಚರಿ ನೃತ್ಯ ತಂಡದ ನೃತ್ಯ ಕಲಾವಿದೆ ಹಿಮ ಅವರು ಪ್ರಸ್ತುತಪಡಿಸಿದ ಭರತನಾಟ್ಯದಲ್ಲಿ ಸಂವಿಧಾನ ಮೌಲ್ಯ, ಶಾಂತಿ ಮತ್ತು ಪ್ರೀತಿಗಾಗಿ ನೃತ್ಯದ ಸಂದೇಶ ಸಾರಿದ್ದು ವಿಶೇಷವಾಗಿತ್ತು.

ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ, ವಿವಿಧ ಪರಿಸರ ಸಂಘಟಗಳ ಪ್ರಮುಖರಾದ ನಟರಾಜ್‌ ನಾಗದಳ, ವೆಂಕಟೇಶ‌, ಎ.ವಿ.ರಘು, ಎಸ್‌.ವೆಂಕಟೇಶ‌, ಮಂಜುನಾಥ್‌ ಕಂಟೆನಕುಂಟೆ, ಸಂಜೀವ್‌ನಾಯಕ‌, ಯುವಶಕ್ತಿ ರೋಹಿತ‌, ಗಾಯಿತ್ರಿ, ಯುವ ಸಂಚಲನ ಚಾರಿಟೇಬಲ್‌ ಟ್ರಸ್ಟಿಗಳಾದ ಮುರಳಿ, ಸರಸ್ವತಿ, ನವೀನ್‌ ಸದಸ್ಯರಾದ ದಿವಾಕರ್‌ ನಾಗ್, ಶಂಕರ್, ಸತೀಶ‌, ಭರತ್, ಹನುಮಂತರಾಜು ಇದ್ದರು.

ದೊಡ್ಡಬಳ್ಳಾಪುರದಲ್ಲಿ ಸಹಚರಿ ನೃತ್ಯ ತಂಡದ ನೃತ್ಯ ಕಲಾವಿದೆ ಹಿಮ ಅವರು ಸಂವಿಧಾನ ಮೌಲ್ಯಗಳು ಶಾಂತಿ ಮತ್ತು ಪ್ರೀತಿಗಾಗಿ ನೃತ್ಯದ ಮೂಲಕ ಸಂದೇಶ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.