ADVERTISEMENT

ದೇವನಹಳ್ಳಿ | ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳು...

ಬಳಕೆಯಾಗದ ಸಿಎಸ್‌ಆರ್‌ ನಿಧಿ l ಬೀಳುವ ಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ಚಾವಣಿ

ನಟರಾಜ ನಾಗಸಂದ್ರ
Published 19 ಜೂನ್ 2024, 4:05 IST
Last Updated 19 ಜೂನ್ 2024, 4:05 IST
   

ದೊಡ್ಡಬಳ್ಳಾಪುರ/ದೇವನಹಳ್ಳಿ: ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳು ಬೀಳುವ ಸ್ಥಿತಿಯಲ್ಲಿ ಇರುವುದು ಪೋಷಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಹತ್ತಾರು ಬೃಹತ್‌ ಕೈಗಾರಿಕೆಗಳು ಇದ್ದರೂ ಕೂಡ ಸೂಕ್ತ ರೀತಿಯಲ್ಲಿ ಸಿಎಸ್‌ಆರ್‌ ನಿಧಿಯನ್ನು ಬಳಕೆ ಮಾಡಿಕೊಳ್ಳದೆ ಇರುವುದೇ ಸರ್ಕಾರಿ ಶಾಲೆಗಳ ಸ್ಥಿತಿಗೆ ಕಾರಣ ಎನ್ನುವ ಆರೋಪ ಇದೆ.

ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಪಟ್ಟಿಲ್ಲಿನ ಅಂಕಿ–ಅಂಶ ‌ಗಮನಿಸಿದರೆ ಹೊಸ ಶಾಲಾ ಕೊಠಡಿಗಳಿಗಿಂತಲೂ ಈಗ ಇರುವ ಶಾಲಾ ಕೊಠಡಿಗಳ ಚಾವಣಿ ಹಾಗೂ ನೆಲಹಾಸು ದುರಸ್ಥಿಯೇ ಹೆಚ್ಚಿನ ಸಂಖ್ಯೆಯಲ್ಲಿದೆ. ಅದರಲ್ಲೂ ಇತ್ತೀಚಿನ ಏಳೆಂಟು ವರ್ಷಗಳಲ್ಲಿ ನಿರ್ಮಿಸಲಾಗಿರುವ ಶಾಲಾ ಕೊಠಡಿಗಳ ಚಾವಣಿ ಸೋರುತ್ತಿರುವುದು ಇಲ್ಲವೆ ಬೀಳುತ್ತಿರುವ ಬಗ್ಗೆಯೇ ಹಚ್ಚಿನ ಕಟ್ಟಡಗಳು ಇವೆ. ಈ ಬಗ್ಗೆ ಶಿಕ್ಷಕರೇ ಹೇಳುವಂತೆ ಕಳಪೆ ಕಾಮಗಾರಿ ಕಾರಣ ಎನ್ನುತ್ತಾರೆ.

ADVERTISEMENT

ಜಿಲ್ಲೆಯಲ್ಲಿ ಶಿಥಿಲವಾಗಿ ತುರ್ತು ಕಾಮಗಾರಿ ಆರಂಭವಾಗಬೇಕಿರುವ ಶಾಲೆಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಣಿವೆಪುರ ಸರ್ಕಾರಿ ಶಾಲೆ, ಹೊಸಕೋಟೆ ತಾಲ್ಲೂಕಿನ ಎತ್ತಿನನೊಡೆಯನಪುರ ಸರ್ಕಾರಿ ಶಾಲೆ, ದೇವನಹಳ್ಳಿ ತಾಲ್ಲೂಕಿನ ಸೋಮತ್ತನಹಳ್ಳಿ ಸರ್ಕಾರಿ ಶಾಲೆಗಳು. ಇವುಗಳಿಗೆ ಈಗಾಗಲೇ ಸಿಎಸ್‌ಆರ್‌ ನಿಧಿಯಲ್ಲಿ ಹಣ ಬಿಡುಗಡೆಯಾಗಿದೆ. ಆದರೆ, ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.

ಜಿಲ್ಲೆಯಾದ್ಯಂತ ದುರಸ್ತಿಯಾಗಬೇಕಿರುವ ಶಾಲಾ ಕೊಠಡಿಗಳ ಮಾಹಿತಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಂತೆ ಅನುದಾನ ಬಂದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ.

-ಕೃಷ್ಣಮೂರ್ತಿ, ಡಿಡಿಪಿಐ, ಬೆಂ.ಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.