ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರ ಕ್ರಾಸ್‌ನಲ್ಲಿ ಮರಿಗಳೊಂದಿಗೆ ಚಿರತೆ ಮರದ ಮೇಲೆ ಕುಳಿತಿದ್ದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ರಾತ್ರಿಯಿಡೀ ಮರಿಗಳೊಂದಿಗೆ ಸಂಚರಿಸುತ್ತಿದ್ದ ಚಿರತೆ ಶುಕ್ರವಾರ ಲಕ್ಕಸಂದ್ರ ಕ್ರಾಸ್ ಬಳಿ ಹೊಂಗೆ ಮರದ ಕುಳಿತಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ.
ಈ ಬಗ್ಗೆ ತುರುವನಹಳ್ಳಿ ಗ್ರಾಮದ ಕಾಂತರಾಜು ಎಂಬುವವರು ನೀಡಿದ ಮಾಹಿತಿ ಮೇರೆಗೆ ಬಲೆ ಸಮೇತ ಅರಣ್ಯ ಇಲಾಖೆಗೆ ಸಿಬ್ಬಂದಿ ಬರುವಷ್ಟರಲ್ಲಿ ಚಿರತೆ ಸ್ಥಳೀಯ ಬೆಟ್ಟಗಳ ಕಡೆಗೆ ಹೋಗಿದೆ. ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಸುಭಾಷ್, ಬಲೆ ಮೂಲಕ ಹಿಡಿಯಲು ಪ್ರಯತ್ನ ಪಡುತ್ತೇವೆ. ಈಗ ಕತ್ತಲಾಗಿರುವುದರಿಂದ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬೋನು ಇಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.