ADVERTISEMENT

ಮತ ಮನೆಮಗಳಿದಂತೆ ಮಾರಿಕೊಳ್ಳಬೇಡಿ: ಶಿವಕುಮಾರ್ ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 4:50 IST
Last Updated 15 ಏಪ್ರಿಲ್ 2024, 4:50 IST
<div class="paragraphs"><p>ಹೊಸಕೋಟೆ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ಬಿಎಎಸ್‌ಎಸ್ ಸಂಘಟನೆಯಿಂದ ಅಂಬೇಡ್ಕರ್ ಜಯಂತಿ ನಡೆಯಿತು</p></div>

ಹೊಸಕೋಟೆ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ಬಿಎಎಸ್‌ಎಸ್ ಸಂಘಟನೆಯಿಂದ ಅಂಬೇಡ್ಕರ್ ಜಯಂತಿ ನಡೆಯಿತು

   

ಹೊಸಕೋಟೆ: ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಭಾರತೀಯ ಅಂಬೇಡ್ಕರ್ ಸೇನೆ ಸಾಮಾಜಿಕ ಸಂಘಟನೆಯಿಂದ ಅಂಬೇಡ್ಕರ್‌ ಜಯಂತಿ ಮತ್ತು ಮತ ಜಾಗೃತಿ ನಡೆಸಲಾಯಿತು.

‘ಮತದಾನ ಎಂಬುವುದು ಮನೆಯ ಮಗಳಿದ್ದಂತೆ’, ಅದನ್ನು ಮಾರಿಕೊಳ್ಳಬೇಡಿ ಎಂಬ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಚಕ್ರವರ್ತಿ, ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಕಟ್ಟಕಡೆಯ ವ್ಯಕ್ತಿಯನ್ನೂ ಪ್ರಮುಖವಾಗಿ ಪರಿಗಣಿಸಬೇಕು ಎಂದುದನ್ನು ಸಂವಿಧಾನ ಮೂಲಕ ತಿಳಿಸಿಕೊಟ್ಟಿದ್ದಾರೆ. ಅವರದ್ದೇ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಆಮಿಷಕ್ಕೆ ಒಳಗಾಗಿ ಮತದಾನದ ಹಕ್ಕನ್ನು ಮಾರಾಟ ಮಾಡಬಾರದು ಎಂದು ಹೇಳಿದರು.

ಸಂಘಟನೆಯ ಪ್ರಧಾನ ಕಾರ್ಯರ್ದರ್ಶಿ ಎಸ್.ಮಂಜುನಾಥ್, ರಾಜ್ಯ ಉಪಾಧ್ಯಕ್ಷ ಕೆಜಿಎಫ್‌ ಅಶ್ವತ್ಥ್, ಕಾನೂನು ಸಲಹೆಗಾರ ಜಿ.ಆರ್.ಶ್ರೀಧರ್, ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ಖಜಾಂಜಿ ಬಿ.ವೆಂಕಟೇಶ್, ಕಾರ್ಯಾಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.