ವಿಜಯಪುರ: ‘ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಹಾಲು ಉತ್ಪಾದಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ
ವಹಿಸುವಲ್ಲಿ ಒಕ್ಕೂಟ ಯಶಸ್ವಿಯಾಗಿದೆ’ ಎಂದು ಬಮೂಲ್ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸ್ ಹೇಳಿದರು.
ಚನ್ನರಾಯಪಟ್ಟಣ ಹೋಬಳಿಯ ಬಿದಲಪುರದ ಡೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಸಂಕಷ್ಟದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಪೂರೈಕೆಯಾಗಬೇಕಾಗಿದ್ದ ಹಾಲಿನ ಪುಡಿ ಹಾಗೆಯೇ ಉಳಿದುಕೊಂಡಿದ್ದು, ಒಕ್ಕೂಟಕ್ಕೆನಷ್ಟವಾಗುತ್ತಿದೆ ಎಂದರು.
ಉತ್ಪಾದಕರು ಗುಣಮಟ್ಟದ ಹಾಲಿನ ಉತ್ಪಾದನೆ ಕಡೆಗೆ ಗಮನಹರಿಸಬೇಕು. ಆಗಮಾತ್ರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ. ರಾಸುಗಳಿಗೆ ಪಶು ಆಹಾರ, ಮಿನರಲ್ ಮಿಕ್ಸರ್, ಅಜೋಲಾ ಸೇರಿದಂತೆ ಗುಣಮಟ್ಟದ ಆಹಾರ ನೀಡಬೇಕು. ಒಕ್ಕೂಟದಿಂದ ಸಿಗುವಂತಹ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಡೇರಿ ಅಧ್ಯಕ್ಷ ಮುನೇಗೌಡ ಮಾತನಾಡಿ, ‘ಸಂಘವು ₹ 4,39,680 ನಿವ್ವಳ ಲಾಭಗಳಿಸಿದೆ. ಸಂಘಕ್ಕೆ ರೈತರು ನೀಡುವ ಸಹಕಾರ ಹಾಗೂ ಗುಣಮಟ್ಟದ ಹಾಲಿನ ಪೂರೈಕೆಯಿಂದ ಮಾತ್ರವೇ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಹಸುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು. ಆ ಮೂಲಕ ರಾಸುಗಳಿಗೆ ಮುಂಬರುವ ದಿನಗಳಲ್ಲಿ ಬರಬಹುದಾದ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ರೈತರು ಮೌಢ್ಯಕ್ಕೆ ಒಳಗಾಗಬಾರದು. ರಾಸುಗಳು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ತುರ್ತಾಗಿ ಪಶುವೈದ್ಯರ ಸೇವೆ ಸಿಗುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿಸ್ತರಣಾಧಿಕಾರಿ ಕೆ.ಎಸ್. ಹನುಮಂತಪ್ಪ, ಡೇರಿ ಉಪಾಧ್ಯಕ್ಷ ಮುನಿವೆಂಕಟಪ್ಪ, ನಿರ್ದೇಶಕರಾದ ಮುನೇಗೌಡ, ಕಾಂತರಾಜ್, ಮುನೇಗೌಡ, ವೆಂಕಟೇಶಪ್ಪ, ಯಲ್ಲಪ್ಪ, ಮುನಿನಂಜಪ್ಪ, ಬಿ.ಎಂ. ಮುನಿರಾಜು, ಕಪಿನಪ್ಪ, ಕಾರ್ಯ ನಿರ್ವಹಣಾಧಿ
ಕಾರಿ ಕೃಷ್ಣಪ್ಪ, ಹಾಲು ಪರೀಕ್ಷಕ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.