ADVERTISEMENT

ಪರಿಸರ ದಿನ ಆಚರಣೆಗೆ ಸೀಮಿತವಾಗದಿರಲಿ: ಮೋಹನ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 13:39 IST
Last Updated 20 ಜೂನ್ 2024, 13:39 IST
ವಿಜಯಪುರದ ನಾಗರಬಾವಿಯ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವಪರಿಸರ ದಿನ ಆಚರಿಸಲಾಯಿತು
ವಿಜಯಪುರದ ನಾಗರಬಾವಿಯ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವಪರಿಸರ ದಿನ ಆಚರಿಸಲಾಯಿತು   

ವಿಜಯಪುರ(ದೇವನಹಳ್ಳಿ): ಪಟ್ಟಣದ ಶಿಡ್ಲಘಟ್ಟ ರಸ್ತೆಯಲ್ಲಿರುವ ನಾಗರಬಾವಿಯ ಬಳಿಯಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಂಘಗಳೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಮೋಹನ್ ಮಾತನಾಡಿ, ಪರಿಸರ ದಿನ ಆಚರಣೆಗೆ ಸೀಮಿತವಾಗಬಾರದು. ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರೆ ಸಾಲದು, ಅನುಷ್ಠಾನವಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪ್ರತಿಯೊಬ್ಬ ಸದಸ್ಯರು, ತಲಾ ಕನಿಷ್ಠ ಎರಡು ಸಸಿ ನೆಟ್ಟು, ಪೋಷಣೆ ಮಾಡಬೇಕು ಎಂದು ಹೇಳಿದರು.

ಮೇಲ್ವಿಚಾರಕ ಹರೀಶ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ತಾಪಮಾನ ಕಡಿಮೆಗೊಳಿಸಬೇಕಾದರೆ ಮರ–ಗಿಡಗಳ ಸಂಖ್ಯೆ ಹೆಚ್ಚು ಮಾಡಬೇಕು. ಮುಂದಿನ ದಿನಗಳಲ್ಲಿ ಬೀಜದುಂಡೆ ತಯಾರಿಸಿ, ಬಿತ್ತನೆ ಮಾಡಬೇಕು ಎಂದರು.

ADVERTISEMENT

ಶೌರ್ಯ ವಿಪತ್ತು ಘಟಕದ ಸದಸ್ಯ ರಾಜಣ್ಣ, ವಿಶ್ವನಾಥ್, ರಾಜೇಶ್, ಭಾಗ್ಯಮ್ಮ, ಮಹಂತಿನಮಠ ಧರ್ಮಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.