ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇ.ವಿ ಚಾರ್ಜಿಂಗ್‌ ಯಂತ್ರ ನಿಷ್ಕ್ರಿಯ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 5:50 IST
Last Updated 7 ಜೂನ್ 2024, 5:50 IST
<div class="paragraphs"><p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ -2ರ ಪಾರ್ಕಿಂಗ್ ಜಾಗದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಚಾರ್ಜಿಂಗ್‌ ಯಂತ್ರ ನಿಷ್ಕ್ರೀಯಗೊಂಡಿರುವುದು</p></div>

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ -2ರ ಪಾರ್ಕಿಂಗ್ ಜಾಗದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಚಾರ್ಜಿಂಗ್‌ ಯಂತ್ರ ನಿಷ್ಕ್ರೀಯಗೊಂಡಿರುವುದು

   

ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾದ ಟರ್ಮಿನಲ್ -2ರ ನೆಲ ಮಹಡಿಯಲ್ಲಿ ಇರುವ ಎಲೆಕ್ಟ್ರಿಕ್ ಕಾರುಗಳ ಇ.ವಿ ಚಾರ್ಜಿಂಗ್‌ ಯಂತ್ರ ನಿಷ್ಕ್ರೀಯಗೊಂಡಿದೆ. ಈ ಕುರಿತು ಪ್ರಯಾಣಿಕರೊಬ್ಬರು ‘ಎಕ್ಸ್‌’ನಲ್ಲಿ ಬರೆದು ಆಕ್ರೋಶ ಹೊರಹಾಕಿದ್ದಾರೆ.

‘ವಿಶ್ವ ಪರಿಸರ ದಿಚಾರಣೆ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಎಲ್ಲ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್‌ ಕಾರುಗಳನ್ನಾಗಿ ಮಾಡುತ್ತೇವೆ ಎಂದು ಬೀಗುವ ವಿಮಾನ ನಿಲ್ದಾಣ ಪ್ರಾಧಿಕಾರ ಇದಕ್ಕೆ ಸೂಕ್ತವಾಗಿ ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಪ್ರಯಾಣಿಕರು ಟೀಕಿಸಿದ್ದಾರೆ.

ADVERTISEMENT

ವಿಮಾನ ನಿಲ್ಧಾಣದ ಪ್ರಾಧಿಕಾರ ಹೊಸದಾಗಿ ಬಿಡುಗಡೆ ಮಾಡಿರುವ ಮೊಬೈಲ್‌ ಆ್ಯಪ್‌ನಲ್ಲಿ ಇ.ವಿ ಚಾರ್ಜಿಂಗ್‌ ವ್ಯವಸ್ಥೆ ಇದೆ. ಎಲೆಕ್ಟ್ರಿಕ್‌  ಕಾರುಗಳನ್ನು ಹೊಂದಿರುವವರು ಟರ್ಮಿನಲ್‌-2ರ ನೆಲ ಮಹಡಿಯಲ್ಲಿ ಕಾರುಗಳನ್ನು ನಿಲುಗಡೆ ಮಾಡಿ ಎಂದು ಹೇಳಲಾಗಿದೆ. ವಾಸ್ತವದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಇತರ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಅದರ ಪಕ್ಕದಲ್ಲಿರುವ ಇ.ವಿ ಚಾರ್ಜಿಂಗ್‌ ಯಂತ್ರವೂ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದೆ.

‘ಪಾರ್ಕಿಂಗ್ ಸ್ಥಳದಲ್ಲಿ ಇವಿ ಚಾರ್ಜಿಂಗ್ ವ್ಯವಸ್ಥೆ ಇದೆ ಎಂದು ಯಾಕೆ ತಪ್ಪು ಮಾಹಿತಿ ನೀಡುತ್ತೀರಿ. ಎಲೆಕ್ಟ್ರಿಕ್‌ ಕಾರುಗಳ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಚಾರ್ಜಿಂಗ್‌ ಯಂತ್ರವೂ ಕೆಲಸ ಮಾಡುತ್ತಿಲ್ಲ’ ಎಂದು ‘ಎಕ್ಸ್’ನಲ್ಲಿ ಪೋಟೊ ಸಮೇತ ಪ್ರಕಟಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಪ್ರಯಾಣಿಕ, ‘ಎಲೆಕ್ಟ್ರಿಕ್‌ ಕಾರುಗಳ ಜಾಗದಲ್ಲಿ ಇತರ ಕಾರುಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥಾಪಕರಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದ್ದಾರೆ.

ಎಲೆಕ್ಟ್ರಿಕ್‌ ಕಾರುಗಳ ಸ್ಥಳದಲ್ಲಿ ಇತರ ಕಾರು ನಿಲುಗಡೆ ಮಾಡಲಾಗಿದೆ.
ವಿಮಾನ ನಿಲ್ದಾಣದ ನೂತನ ಮೊಬೈಲ್‌ ಆಪ್‌ನಲ್ಲಿ ಟರ್ಮಿನಲ್‌-2ರಲ್ಲಿ ಇ.ವಿ ಚಾರ್ಜಿಂಗ್‌ ಸೌಲಭ್ಯ ಇದೆ ಎಂದು ತೋರಿಸುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.