ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡುಕುಂಟೆ ಗ್ರಾಮದಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದ ರೇಷ್ಮೆಗೂಡು ಚಂದ್ರಿಕೆ ಇಟ್ಟಿದ್ದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ಮೌಲ್ಯದ ರೇಷ್ಮೆಗೂಡು ಮತ್ತು ಚಂದ್ರಿಕೆ ಮಂಗಳವಾರ ರಾತ್ರಿ ಭಸ್ಮವಾಗಿದೆ.
ಕಾಡುಕುಂಟೆಯ ರೈತ ಸುದರ್ಶನರೆಡ್ಡಿ ತಮ್ಮ ತೋಟದಲ್ಲೇ ಮನೆ ನಿರ್ಮಿಸಿ ಪ್ರಥಮ ಬಾರಿಗೆ 60 ಚಂದ್ರಂಕೆಯಲ್ಲಿ ರೇಷ್ಮೆ ಹುಳು ಗೂಡುಕಟ್ಟಲು ಬಿಟ್ಟಿದ್ದರು. ಚಂದ್ರಿಕೆಗಳಿಂದ ಗೂಡು ಬಿಡಿಸಲು ಬುಧವಾರ ಬರುವಂತೆ ಕಾರ್ಮಿಕರಿಗು ಹೇಳಿದ್ದರು. ಆದರೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ರೇಷ್ಮೆ ಚಂದ್ರಿಕೆಗಳನ್ನು ಶೇಖರಣೆ ಮಾಡಿ ಇಟ್ಟ ಮನೆಗೆ ಬೆಂಕಿ ಇಟ್ಟ ಪರಿಣಾಮ ಎಲ್ಲಾ ಚಂದ್ರಿಕೆಗಳು ಸುಟ್ಟು ಹೋಗಿವೆ.
ಸುಮಾರು ₹3 ಲಕ್ಷ ಮೌಲ್ಯದ ರೇಷ್ಮೆ ಗೂಡು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.