ADVERTISEMENT

ವಿಮಾನ ನಿರ್ವಹಣೆ ಎಂಜಿನಿಯರಿಂಗ್‌ ಕೋರ್ಸ್ ಆರಂಭಕ್ಕೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 21:26 IST
Last Updated 22 ನವೆಂಬರ್ 2024, 21:26 IST
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮೋದಿತ ಎರಡು ವರ್ಷದ ವಿಮಾನ ನಿರ್ವಹಣೆ ಎಂಜಿನಿಯರಿಂಗ್‌ (ಎಎಂಇ) ಪ್ರಯಾಣಪತ್ರ ಕೋರ್ಸ್‌ ಅನ್ನು ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಏರ್ ಇಂಡಿಯಾ ಸಂಸ್ಥೆ ಆರಂಭಿಸಲಿದೆ.

ತರಬೇತಿ ಕೋರ್ಸ್‌ಗಾಗಿ ಏರ್‌ ಇಂಡಿಯಾ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಎಎಂಇ ಕೋರ್ಸ್‌ಗಾಗಿ ಅಗತ್ಯವಿರುವ ತರಗತಿ ಕೊಠಡಿ, ಪ್ರಯೋಗಾಲಯ, ಪ್ರಾಯೋಗಿಕ ತರಬೇತಿಗಾಗಿ ಕೌಶಲ್ಯಾಧಾರಿತ ವೃತ್ತಿಪರ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಇದಕ್ಕಾಗಿ ದೇವನಹಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ 86 ಸಾವಿರ ಅಡಿಯಷ್ಟು ವಿಸ್ತೀರ್ಣದ ಕ್ಯಾಂಪಸ್‌ ನಿರ್ಮಾಣವಾಗಲಿದೆ. 2026ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈ ಕೋರ್ಸ್‌ ವಿಮಾನದ ದುರಸ್ತಿ ಹಾಗೂ ನಿರ್ವಹಣೆ ಕುರಿತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.