ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನೇನು ದುಬೈ ಮಾರ್ಗವಾಗಿ ತೆರಳಬೇಕಿದ್ದ ಪ್ರಯಾಣಿಕರ ಬಳಿ 24,000 ಅಮೆರಿಕನ್ ಡಾಲರ್, 3,370 ಸೌದಿ ರಿಯಲ್, 2,730 ಯುಎಇ ದಿರಾಮ್ಸ್ ನೋಟುಗಳಿದ್ದು, ವಿಮಾನದ ಮೂಲಕ ಸಾಗಣೆ ಮಾಡಲು ಯತ್ನಿಸಿದ್ದರು.
ಬಂಧಿತರಿಂದ ವಶಕ್ಕೆ ಪಡೆದ ಒಟ್ಟು ವಿದೇಶಿ ಕರೆನ್ಸಿಯ ಮೌಲ್ಯ ₹ 20.75 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.