ADVERTISEMENT

ಚಿನ್ನದಗಟ್ಟಿ ಕದ್ದ ಬಾಲಕ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 0:30 IST
Last Updated 28 ಜನವರಿ 2024, 0:30 IST
ಬಾಲಕನ ಶೂ ನಲ್ಲಿ ದೊರೆತ‌ ಚಿನ್ನಸ ಬಿಸ್ಕತ್ತು
ಬಾಲಕನ ಶೂ ನಲ್ಲಿ ದೊರೆತ‌ ಚಿನ್ನಸ ಬಿಸ್ಕತ್ತು   

ದೇವನಹಳ್ಳಿ: ಕೆಲಸ ಮಾಡುತ್ತಿದ್ದ ಚಿನ್ನದ ಮಳಿಗೆಯಲ್ಲಿ ಕದ್ದಿದ್ದ ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡು ಹೊರಟಿದ್ದ ಬಾಲಕನೊಬ್ಬನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಗುರುವಾರ ವಶಕ್ಕೆ ಪಡೆದಿದ್ದಾರೆ.

ಬಾಲಕನಿಂದ ₹12.46 ಲಕ್ಷ ಮೌಲ್ಯದ ತಲಾ 50 ಗ್ರಾಂ ತೂಕದ ಎರಡು ಚಿನ್ನಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಪರಿವರ್ತನಾ ಕೇಂದ್ರದ ಸುಪರ್ದಿಗೆ ಕೊಡಲಾಗಿದೆ. 

ಮೆಜೆಸ್ಟಿಕ್‌ ಚಿನ್ನದ ಮಳೆಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಅಂಗಡಿಯಲ್ಲಿ 100 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ಕದ್ದು ಅಹಮದಾಬಾದ್‌ ತೆಗೆದುಕೊಂಡು ಹೊರಟಿದ್ದ. ಅದಕ್ಕಾಗಿ ಜ.25 ರಂದು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದ.

ADVERTISEMENT

ಬಾಲಕ ಶೂಗಳಲ್ಲಿ ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡಿರುವುದು ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಸ್ಕ್ಯಾನಿಂಗ್‌ ಯಂತ್ರದಲ್ಲಿ ಪತ್ತೆಯಾಗಿದೆ. 

ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆದ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಸಿಐಎಸ್‌ಎಫ್‌ ಸಬ್ ಇನ್‌ಸ್ಪೆಕ್ಟರ್‌ ದೀಪಕ್‌ ತನ್ವಾರ್, ಪ್ರಕರಣ ದಾಖಲಿಸಿಕೊಂಡು, ಆತನನ್ನು ಪರಿವರ್ತನಾ ಕೇಂದ್ರಕ್ಕೆ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.