ವಿಜಯಪುರ(ದೇವನಹಳ್ಳಿ): ಶನಿವಾರ ಬಂದರೆ ವಿಜಯಪುರದ ಜನರು ಬೂದಗುಂಬಳದ ದಮ್ಮುರೋಟಿ ಸವಿಯಲು ಇಲ್ಲಿಯ ಗಾಂಧಿಚೌಕ್‌ನಲ್ಲಿರುವ ಸೂರ್ಯನಾರಾಯಣರಾವ್ ಸ್ವೀಟ್ ಸ್ಟಾಲ್ ಸಾಲುಗಟ್ಟುತ್ತಾರೆ. ನಾಲ್ಕು ತಲೆ ಮಾರುಗಳಿಂದ ದಮ್‌ರೋಟ್ ತಯಾರಿಕೆಯಲ್ಲಿ ತೊಡಗಿರುವ ಈ ಅಂಗಡಿಯ ಖಾದ್ಯ ಜನಪ್ರಿಯವಾಗಿದೆ.
ಸ್ವೀಟ್ ಸ್ಟಾಲ್‌ನಲ್ಲಿ ವೈವಿಧ್ಯಮಯ ಸಿಹಿ ಖಾದ್ಯಗಳ ಜೊತೆ ಸಂಜೆ 4-6 ಗಂಟೆಯವರೆಗೂ ಆಲೂ ಬೊಂಡಾ, ಈರುಳ್ಳಿ ಬೊಂಡಾ, ಉದ್ದಿನವಡೆ ಮಾರಾಟವೂ ಜೋರಾಗಿ ನಡೆಯುತ್ತದೆ. ತುಪ್ಪದ ಮೈಸೂರು ಪಾಕ್, ಬಾದಾಮಿ ಹಲ್ವಾ ಕೂಡ ಜನಪ್ರಿಯ ಪಾಕಗಳು.
ಪ್ರತಿ ಶನಿವಾರ ಮಾತ್ರ ಬೂದುಗುಂಬಳ ಮತ್ತು ನಂದಿನಿ ತುಪ್ಪದಿಂದ ದಮ್ಮುರೋಟಿ ತಯಾರು ಮಾಡುತ್ತಾರೆ. ಶುಕ್ರವಾರವೇ ಸಿಹಿಪ್ರಿಯರು ದಮ್ಮುರೋಟಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ.
ಜನ್ಮದಿನ, ಸಭೆ, ಸಮಾರಂಭಗಳಲ್ಲೂ ಈ ಖಾದ್ಯ ಇದ್ದೇ ಇರುತ್ತದೆ. ಒಂದು ಕೆ.ಜಿ. ದಮ್ಮುರೋಟಿ ₹800ರಂತೆ ಮಾರಾಟವಾಗುತ್ತಿದೆ. ವಾರದ ಒಂದು ದಿನದಲ್ಲಿ 15 ಕೆ.ಜಿ ದಮ್ಮುರೋಟಿ ಮಾರಾಟ ಮಾಡುತ್ತಿದ್ದಾರೆ.
ಇದರ ಜೊತೆ ಬೆಂಗಾಲಿ ಖಾದ್ಯಗಳಾದ ಚಂಪಾಕಲಿ,ರಸಮಲೈ, ಚಂದ್ರಹಾರ್, ಸ್ಯಾಂಡ್ ವಿಚ್ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಗೋಡಂಬಿ, ಮಿಕ್ಸರ್, ಬೆಣ್ಣೆ ಮುರುಕು, ಅವಲಕ್ಕಿಗೂ ಬೇಡಿಕೆ ಇದೆ ಎನ್ನುತ್ತಾರೆ ಅಂಗಡಿ ಮಾಲೀಕ ಶ್ರೀನಾಥ್.
‘ಬೆಲೆಗಿಂತ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದೇವೆ. ಎಲ್ಲಾ ಸಿಹಿ ಖಾದ್ಯಗಳಿಗೂ ನಂದಿನಿ ತುಪ್ಪ ಬಳಕೆ ಮಾಡುತ್ತಿರುವುದರಿಂದ ಸಹಜವಾಗಿ ರುಚಿ ಹೆಚ್ಚಾಗುತ್ತದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.