ADVERTISEMENT

ಡಾಂಬರು ಕಾಣದ ಹಾರೋಹಳ್ಳಿ-ಕೋರಮಂಗಲ ರಸ್ತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:44 IST
Last Updated 21 ಅಕ್ಟೋಬರ್ 2024, 14:44 IST
ವಿಜಯಪುರ ಹೋಬಳಿ ಹಾರೋಹಳ್ಳಿ–ಕೋರಮಂಗಲ ರಸ್ತೆಯ ದುಸ್ಥಿತಿ
ವಿಜಯಪುರ ಹೋಬಳಿ ಹಾರೋಹಳ್ಳಿ–ಕೋರಮಂಗಲ ರಸ್ತೆಯ ದುಸ್ಥಿತಿ   

ವಿಜಯಪುರ(ದೇವನಹಳ್ಳಿ): ಹೋಬಳಿಯ ಹಾರೋಹಳ್ಳಿ–ಕೋರಮಂಗಲ ರಸ್ತೆ ತೀರಾ ಹದಗೆಟ್ಟಿದ್ದು, ರೈತರು, ತೋಟಗಳಲ್ಲಿ ಬೆಳೆದಿರುವ ಬೆಳೆ ಸಾಗಾಣಿಕೆಗೆ ತೊಡಕುಂಟಾಗುತ್ತಿದ್ದು, ರಸ್ತೆಗೆ ಡಾಂಬರೀಕರಣ ಮಾಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿರುವ ತೋಟಗಳಲ್ಲಿ ರೈತರು, ದ್ರಾಕ್ಷಿ, ಹೂವು, ತರಕಾರಿ ಸೇರಿದಂತೆ ಮುಂತಾದ ಬೆಳೆ ಬೆಳೆಯುತ್ತಿದ್ದೇವೆ. ಆದರೆ, ಬೆಳೆಗಳನ್ನು ಸಾಗಾಣಿಕೆ ಮಾಡಲು ಕಷ್ಟವಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ಸ್ವಲ್ಪ ದೂರಕ್ಕೆ ನರೇಗಾ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ. ಉಳಿದ ರಸ್ತೆಯಲ್ಲಿ ಮಳೆ ಬಂದರೆ, ಸಂಚಾರ ಮಾಡಲು ಕಷ್ಟವಾಗುತ್ತಿದೆ. ಮಳೆ ಬಿದ್ದಾಗ ಸುತ್ತಮುತ್ತಲಿನ ತೋಟಗಳಲ್ಲಿನ ನೀರು ರಸ್ತೆಯಲ್ಲೆ ಹರಿಯುತ್ತಿರುವುದರಿಂದ ರಸ್ತೆಯಲ್ಲಿರುವ ಜಲ್ಲಿ ಕಲ್ಲುಗಳೆಲ್ಲಾ ಕಿತ್ತುಹೋಗಿವೆ. ರಸ್ತೆಯಲ್ಲಿ ಹಳ್ಳಗಳು ಬಿದ್ದು, ನೀರಿನಿಂದ ತುಂಬಿಕೊಂಡಿವೆ ಎಂದು ತಿಳಿಸಿದರು.

‘ಗ್ರಾಮದ ಸುತ್ತಲೂ ನರೇಗಾ ಯೋಜನೆಯನ್ನು ಬಳಕೆ ಮಾಡಿಕೊಂಡು ಅಗತ್ಯವಿರುವ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಹಾಕಿದ್ದೇವೆ. ಕೋರಮಂಗಲದ ಕಡೆಗೆ ಸಂಚರಿಸುವ ರಸ್ತೆಯನ್ನೂ ಪರಿಶೀಲನೆ ಮಾಡುತ್ತೇವೆ. ಅವಕಾಶವಿದ್ದರೆ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಕಾಂಕ್ರೀಟ್ ರಸ್ತೆ ಹಾಕಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಪಿಡಿಓ ಆರ್.ಜಿ.ಸೌಮ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.