ADVERTISEMENT

ಹೊಸಕೋಟೆ: ಡೈರಿಗೆ ಏಳಿಗೆಗೆ ಪಕ್ಷಾತೀತ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:00 IST
Last Updated 19 ಜುಲೈ 2024, 16:00 IST
ಹೊಸಕೋಟೆ ತಾಲ್ಲೂಕಿನ ನಡುವಿನಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು
ಹೊಸಕೋಟೆ ತಾಲ್ಲೂಕಿನ ನಡುವಿನಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು   

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ನಡುವಿನಪುರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಮಾನ್ಯ ವಾರ್ಷಿಕ ಸಭೆ ನಡೆಯಿತು.

ನಡುವಿನಪುರ ಡೇರಿ ಅಧ್ಯಕ್ಷ ವಿ.ಮುನಿರಾಜು(ರಾಜಣ್ಣ) ಮಾತನಾಡಿ, ಸಂಘದ ಆಡಳಿತ ಮಂಡಳಿ ರೈತರ ಸಹಕಾರದಿಂದ 2023-24ನೇ ಸಾಲಿನಲ್ಲಿ ₹12 ಲಕ್ಷ ಲಾಭಾಂಶ ಬಂದಿದ್ದು, ನಿವ್ವಳ ಲಾಭ ₹5.50 ಲಕ್ಷ ಬಂದಿದೆ. ರೈತರಿಗೆ ಈ ವರ್ಷ ಶೇ.2.70 ಬೋನಸ್ ನೀಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಾಲಿನ ಡೇರಿಗಳು ಅಭಿವೃದ್ಧಿಯಾಗಬೇಕಾದರೆ, ಪಕ್ಷಾತೀತವಾಗಿ ಕೆಲಸ ಮಾಡಬೇಕು. ರೈತರು ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಿದಾಗ ಮಾತ್ರ ಡೇರಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಬಮೂಲ್ ಹೊಸಕೋಟೆ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್ ಮಾತನಾಡಿ, ತಾಲ್ಲೂನಲ್ಲಿ 170 ಡೇರಿಗಳಿದ್ದು, 2023-24ನೆ ಸಾಲಿನ ಇದೇ ಮೊದಲ ಸರ್ವ ಸದಸ್ಯರ ಸಭೆಯಾಗಿದೆ ಎಂದರು.

ತಾಲ್ಲೂಕಿನಲ್ಲಿ 8,708 ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ವಿವಿಧ ರೋಗಗಳಿಗೆ ತುತ್ತಾಗಿ 19 ರಾಸುಗಳು ಮರಣ ಹೊಂದಿವೆ. ಅಕಾಲಿಕ ಮರಣ ಹೊಂದಿದರೆ ರಾಸುಗಳಿಗೆ ₹50 ಸಾವಿರ, 1 ವರ್ಷ ಮೇಲ್ಪಟ್ಟ ಕರುಗಳಿಗೆ ₹18 ಸಾವಿರ, ಎಮ್ಮೆಗಳಿಗೆ ₹25 ಸಾವಿರ ವಿಮಾ ಮೊತ್ತ ದೊರೆಯಲಿದೆ ಎಂದರು.

ಹೊಸಕೋಟೆ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕ ಕೆ.ಶ್ರೀರಾಮ್, ವಿಸ್ತರಣಾಧಿಕಾರಿ ಟಿ.ಎಂ.ಆನಂದ್, ರಮೇಶ್, ಕೆ.ಆರ್.ವಿನಯ್ ಕುಮಾರ್, ಪವಿತ್ರಾ, ವಿದ್ಯಾಶ್ರೀ, ಬಮೂಲಿನ ಕೃಷಿ ಅಧಿಕಾರಿ ಸೌಮ್ಯ, ಗ್ರಾಪಂನ ಸದಸ್ಯ ಎನ್.ಎನ್.ಮಂಜುನಾಥ್, ಉಪಾಧ್ಯಕ್ಷ ವಿ.ಮಂಜುನಾಥ್, ನಿರ್ದೇಶಕರಾದ ಎಂ.ಲಕ್ಷ್ಮೀನಾರಾಯಣ, ಪಿ.ಮಂಜುನಾಥ್, ಎನ್.ಕೆ.ಮುನಿರಾಜು. ಬಿ.ಹರೀಶ್, ಎ.ಅಶ್ವತಪ್ಪ, ಕೆ.ನಾರಾಯಣಸ್ವಾಮಿ, ಎನ್.ಶ್ರೀನಿವಾಸ್, ಭಾಗ್ಯಮ್ಮ, ಕೆ.ನಾರಾಯಣಸ್ವಾಮಿ, ಜ್ಯೋತಿ, ಎನ್.ಮಂಜುನಾಥ್, ಮಾಜಿ ಅಧ್ಯಕ್ಷ ಎನ್.ಪಿ.ನಾರಾಯಣಸಪ್ಪ, ಬಿ.ಪಿಳ್ಳಪ್ಪ, ಎನ್.ಮುನಿರಾಜು, ವಿ.ಲಕ್ಷ್ಮಣ್‌, ಸಿಇಒ ಎನ್.ಲೋಕೇಶ್, ಸಹಾಯಕ ಎನ್.ಎಸ್.ದೀಪಕ್, ಎಸ್.ಜಯಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.