ADVERTISEMENT

ಹೊಸಕೋಟೆ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಸಾವು

ಜಾರಿಬಿದ್ದ ಮಗಳ ರಕ್ಷಣೆಗೆ ಹೋದ ಪೋಷಕರೂ ಸಾವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:08 IST
Last Updated 3 ಮಾರ್ಚ್ 2024, 16:08 IST
<div class="paragraphs"><p>ಕೃಷಿಹೊಂಡದ ಬಳಿ ಸೇರಿರುವ ಜನರು</p></div>

ಕೃಷಿಹೊಂಡದ ಬಳಿ ಸೇರಿರುವ ಜನರು

   

ಹೊಸಕೋಟೆ: ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ಕರಿಬೀರನ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಕೃಷಿ ಹೊಂಡದಲ್ಲಿ ಕೈತೊಳೆಯಲು ಹೋಗಿ ಜಾರಿ ಬಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ–ತಂದೆ ಸೇರಿದಂತೆ ಮೂವರೂ ಮೃತಪಟ್ಟಿದ್ದಾರೆ.

ಮರಿಯಪ್ಪ(70), ಮುನಿಯಮ್ಮ(60) ಮತ್ತು ದಂಪತಿ ಪುತ್ರಿ ಭಾರತಿ(40) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

ADVERTISEMENT

ಕೈತೊಳೆಯಲು ಕೃಷಿ ಹೊಂಡಕ್ಕೆ ಹೋದ ಮಗಳು ಭಾರತಿ ಜಾರಿ ಬಿದ್ದು, ಮುಳಗುತ್ತಿರುವುದನ್ನು ಗಮನಿಸಿದ ಆಕೆ ತಂದೆ ಮರಿಯಪ್ಪ ಮತ್ತು ತಾಯಿ ಮುನಿಯಮ್ಮ ಮಗಳನ್ನು ರಕ್ಷಿಸಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಕೆರೆಯಲ್ಲಿ ಹೂಳು ತುಂಬಿದ್ದರಿಂದ ಮೂವರು ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸಂಬಂಧ ಮೃತರ ಸಂಬಂಧಿಕರು ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.