ADVERTISEMENT

ಬಸವಕಲ್ಯಾಣ ಮಠದಲ್ಲಿ ಕಡಲೆ ಕಾಯಿ ಪರಿಷೆ ಇಂದು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 13:46 IST
Last Updated 24 ನವೆಂಬರ್ 2024, 13:46 IST

ವಿಜಯಪುರ (ದೇವನಹಳ್ಳಿ): ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಬಸವಕಲ್ಯಾಣ ಮಠದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಶಿವಪಂಚಾಕ್ಷರಿ ಮಹಾಮಂತ್ರ ಅಖಂಡ ಭಜನೆಯ ಸಮಾರೋಪ ಸಮಾರಂಭ ಹಾಗೂ ಕಡಲೆಕಾಯಿ ಪರಿಷೆಯನ್ನು ನ.25 ರಂದು ಏರ್ಪಡಿಸಲಾಗಿದೆ ಎಂದು ಬಸವಕಲ್ಯಾಣ ಮಠದ ಕಾರ್ಯದರ್ಶಿ ಜಯಕುಮಾರ್ ತಿಳಿಸಿದ್ದಾರೆ.

ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವಸ್ವಾಮಿಜಿ ಸಾನ್ನಿಧ್ಯವಹಿಸಲಿದ್ದು, ಕಿರಿಯ ಸದಾಶಿವ ಸ್ವಾಮೀಜಿ, ರಾಮೋಹಳ್ಳಿ ಸಿದ್ದಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢ ಭಾರತಿ ಸ್ವಾಮೀಜಿ, ಬಿಡದಿ ಚೌಕಿಮಠದ ಹುಚ್ಚಪ್ಪ ಸ್ವಾಮೀಜಿ, ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಲಿದ್ದಾರೆ.

ನಿವೃತ್ತ ಉಪನ್ಯಾಸಕ ಮೊಹಮ್ಮದ್ ಖಾಸಿಂ ಉಪನ್ಯಾಸ ನೀಡಲಿದ್ದಾರೆ. ದಾನಿಗಳು ಹಾಗೂ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆಗೈದ ಹಿರಿಯರನ್ನು ಸನ್ಮಾನಿಸಲಾಗುತ್ತದೆ. ಕಲಾವಿದರಿಂದ ಭಕ್ತಿಗೀತೆ, ಭಾವಗೀತೆ, ಮತ್ತು ವಚನ ಗಾಯನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.