ADVERTISEMENT

ಕಾರ್ಗಿಲ್ ವಿಜಯ್ ದಿವಸ್ ನೆನಪಿಗೆ ಸಸಿ ನಾಟಿ

ಸಸಿ ನಾಟಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:29 IST
Last Updated 26 ಜುಲೈ 2024, 16:29 IST
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸಸಿ ನೆಟ್ಟ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು
ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸಸಿ ನೆಟ್ಟ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು    

ಹೊಸಕೋಟೆ: 25ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಎನ್‌ಸಿಸಿ ಘಟಕದ ವತಿಯಿಂದ ಸಸಿ ನೆಡಲಾಯಿತು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಈರಣ್ಣ, ಸೈನಿಕರು ಹಲವು ಸಂಕಷ್ಟ ಎದುರಿಸಿ ಈ ದೇಶವನ್ನು ಹಲವು ಸಮಸ್ಯೆಗಳಿಂದ ಕಾಯುತ್ತಿದ್ದಾರೆ. ಸೈನಿಕರ ಶೌರ್ಯ ಸಾಹಸಕ್ಕೆ ಹೆಸರಾದ ಕಾರ್ಗಿಲ್ ಯುದ್ಧ ಜಯಿಸಿ ಇಂದಿಗೆ 25 ವರ್ಷ ಸಂದಿದೆ. ಭಾರತೀಯರು ಹೆಮ್ಮೆಯಿಂದ ಈ ದಿನವನ್ನು ಆಚರಣೆ ಮಾಡುತ್ತಿರುವುದು ದೇಶ ಪ್ರೇಮದ ದ್ಯೋತಕ ಎಂದರು.

ಎನ್‌ಸಿಸಿ ಕಾರ್ಯಕ್ರಮಾಧಿಕಾರಿ ಪ್ರೊ.ವಿಶ್ವೇಶ್ವರಯ್ಯ ಮಾತನಾಡಿ, ದೇಶದ ಇತಿಹಾಸದಲ್ಲಿ ಹಲವು ಯುದ್ದಗಳನ್ನು ಸೈನಿಕರು ಗೆದ್ದಿದ್ದಾರೆ. ಅದರಲ್ಲಿ ಕಾರ್ಗಿಲ್ ಯುದ್ಧ ಸೈನಿಕರ ಶೌರ್ಯ ಎತ್ತಿ ಹಿಡಿದಿದೆ ಎಂದರು.

ADVERTISEMENT

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡೋರಿನ್ ಸ್ನೇಹಲತಾ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ.ಅಶ್ವತ್‌ನಾರಾಯಣ್, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕಾವಾಲಯ್ಯ, ಪ್ರೊ.ಶ್ರೀನಿವಾಸ್ ಆಚಾರ್ ಸೇರಿದಂತೆ ಎನ್‌ಸಿಸಿ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.