ವಿಜಯಪುರ (ದೇವನಹಳ್ಳಿ): ರಾಜ್ಯ ವಿಧಾನಸಭೆ ಚುನಾವಣೆಗೆ ಮೇ10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬುಧವಾರ ವಹಿವಾಟು ಇರುವುದಿಲ್ಲ.
‘ಮೇ 9 ರಂದು ಸಂಜೆಯಿಂದಲೇ ಯಾರೂ ಮಾರುಕಟ್ಟೆಗೆ ರೇಷ್ಮೆಗೂಡು ತರಬಾರದು. ಮೇ 10 ರಂದು ಸಂಜೆ ಗೂಡು ತರಬಹುದು. ಮೇ11 ರಂದು ಬೆಳಿಗ್ಗೆ ಎಂದಿನಂತೆ ಹರಾಜು ಪ್ರಕ್ರಿಯೆ ಮತ್ತು ವಹಿವಾಟು ನಡೆಯಲಿದೆ‘ ಎಂದು ಮಾರುಕಟ್ಟೆಯ ಉಪ ನಿರ್ದೆಶಕ ಡಾ. ಎಸ್.ಸುಂದರ್ ರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.