ADVERTISEMENT

ದೇವನಹಳ್ಳಿ: ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:13 IST
Last Updated 11 ಸೆಪ್ಟೆಂಬರ್ 2020, 2:13 IST
ಯಾದವ ಸಂಘದಿಂದ ಎ.ಸಿ.ಶ್ರೀನಿವಾಸ್‍ರನ್ನು ಅಭಿನಂದಿಸಲಾಯಿತು
ಯಾದವ ಸಂಘದಿಂದ ಎ.ಸಿ.ಶ್ರೀನಿವಾಸ್‍ರನ್ನು ಅಭಿನಂದಿಸಲಾಯಿತು   

ದೇವನಹಳ್ಳಿ: ತಾಲ್ಲೂಕಿನ ಯಾದವ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು. ಇಲ್ಲಿನ ಐತಿಹಾಸಿಕ ಕೋಟೆ ಶ್ರೀ ವೇಣುಗೋಪಾಲಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಂಚಾಂಗದ ಪ್ರಕಾರ ರೋಹಿಣಿ ನಕ್ಷತ್ರದ ದಿನದಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ.

ಕೆ.ಪಿ.ಸಿ.ಸಿ.ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ‘ತಾಲ್ಲೂಕಿನಲ್ಲಿ ಯಾದವ ಸಮುದಾಯ 13 ಸಾವಿರದಷ್ಟಿದೆ. ಈ ಬಾರಿ ಸರಳ ಆಚರಣೆಯ ಜೊತೆಗೆ ಸೋಂಕಿನ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಘಟಕ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್ ಮಾತನಾಡಿ, ‘ಸನಾತನ ಪರಂಪರೆಯಲ್ಲಿ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಅಚರಣೆಗಳ ಹಿಂದೆ ವೈಜ್ಞಾನಿಕ ಉದ್ದೇಶವಿದೆ. ಸಮಾನತೆ, ಪರಸ್ಪರ ವಿಶ್ವಾಸ ಮೂಡಿಸುವುದು, ಬಾಂಧವ್ಯದ ಬೇಸುಗೆ, ಒಗ್ಗಟ್ಟು ಸಾಮೂಹಿಕ ಆಚರಣೆಯಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಆಚರಣೆ ಸಾಗಿಬಂದಿದೆ’ ಎಂದರು.

ADVERTISEMENT

ತಾಲ್ಲೂಕು ಯಾದವ ಸಂಘ ಅಧ್ಯಕ್ಷ ಎನ್.ರಘು ಉಪಾಧ್ಯಕ್ಷ ಜಿಂಕಲ ಮುನಿರಾಜು, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಶ್ರೀಧರ ಮೂರ್ತಿ, ಪುರಸಭೆ ಸದಸ್ಯರಾದ ಬಾಂಬೆ ನಾರಾಯಣಸ್ವಾಮಿ, ವೇಣುಗೋಪಾಲ್, ಮಂಜುನಾಥ್, ವಿ.ಗೋಪಾಲ್, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಸುಮಂತ್, ಮುಖಂಡರಾದ ಬಿ.ಕೆ.ನಾರಾಯಣಸ್ವಾಮಿ, ಜಿ.ಚಂದ್ರಣ್ಣ, ಎಂ.ಮೂರ್ತಿ, ಮರಿಯಪ್ಪ, ನಾರಾಯಣಸ್ವಾಮಿ, ಆನಂದ್, ಸೋಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.