ದೊಡ್ಡಬಳ್ಳಾಪುರ: ರಾಜ್ಯ ಹೈಕೋರ್ಟ್ ಆದೇಶದಂತೆ ತಾಲ್ಲೂಕು ವಕೀಲರ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಹೆಸರನ್ನು ಸೋಮವಾರ ಚುನಾವಣಾ ಅಧಿಕಾರಿ ಎನ್.ಎಸ್.ಮುರಳಿಕೃಷ್ಣ ಅವರು ಅಧಿಕೃತವಾಗಿ ಘೋಷಿಸಿ, ಆಯ್ಕೆ ಪ್ರಮಾಣಪತ್ರ ವಿತರಣೆ ಮಾಡಿದರು.
ನಗರದ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಹಕಾರ ಸಂಘಗಳ ಸಹಾಯಕ ನೋಂದಣಿ ಅಧಿಕಾರಿ ಹಾಗೂ ವಕೀಲರ ಸಂಘದ ಆಡಳಿತ ಅಧಿಕಾರಿ ಶೀಲಾ ಅವರು, ಮತದಾರರ ಪಟ್ಟಿಯಲ್ಲಿನ ಗೊಂದಲವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಚುನಾವಣೆ ಒಂದು ವಾರದ ಹಿಂದೆಯೇ ನಡೆದಿದ್ದರು ಸಹ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿರಲಿಲ್ಲ. ಈಗ ಹೈಕೋರ್ಟ್ ಆದೇಶದ ನಿಯಮದಂತೆಯೇ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ರವಿ, ಉಪಾಧ್ಯಕ್ಷರಾಗಿ ಎಂ.ಆರ್.ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು, ನಿರ್ದೇಶಕರಾಗಿ ಸೈಯದ್ ನಾಜಿಮ್ ಉಲ್ಲಾ, ಬಿ.ಪ್ರವೀಣ್‌ಕುಮಾರ್ ಗುಪ್ತ, ಮಹಮ್ಮದ್ ಮಮ್ತಾಜ್, ಎನ್.ಲೀಲಾವತಿ, ಎ.ಎಸ್.ಚಂದೇಶ್‌ಕುಮಾರ್, ಎನ್.ಅನಿತ, ಆರ್.ಪ್ರಭಾಕರ್, ಟಿ.ಜೆ.ಶಿವಕುಮಾರ್, ಟಿ.ಉಮೇಶ, ಎಂ.ಮೋಹನ್‌ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.