ADVERTISEMENT

ಆನೇಕಲ್: ಮುತ್ಯಾಲಮಡುವುಗೆ ಮಳೆ ಸೊಬಗು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:52 IST
Last Updated 22 ಅಕ್ಟೋಬರ್ 2024, 15:52 IST
 ಮುತ್ಯಾಲಮಡುವು ಜಲಪಾತ
 ಮುತ್ಯಾಲಮಡುವು ಜಲಪಾತ    

ಆನೇಕಲ್ : ಭಾರಿ ಮಳೆಯಿಂದಾಗಿ ತಾಲ್ಲೂಕಿನ ಪ್ರವಾಸಿ ತಾಣ ಮುತ್ಯಾಲಮಡುವಿನಲ್ಲಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಸುತ್ತಲಿನ ಹಸಿರಿನ ನಡುವೆ 250ಅಡಿಗೂ ಹೆಚ್ಚು ಎತ್ತರಿಂದ ಧುಮ್ಮಿಕ್ಕಿತ್ತಿರುವ ಜಲಾಪತ ನೋಡುವುದೇ ಕಣ್ಣಿಗೆ ಹಬ್ಬ. ಡ್ರೋನ್‌ನ ದೃಶ್ಯ ಮುತ್ಯಾಲಮಡುವಿನ ಸೊಬಗನ್ನು ಹೆಚ್ಚಿಸಿದೆ. ಮಳೆಯಿಂದಾಗಿ ನೀರು ಭೋರ್ಗರೆಯುತ್ತಿದ್ದು ಕಳೆದ ಎರಡು ದಿನಗಳಿಂದ ಜಲಪಾತ ವೀಕ್ಷಿಸಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಹಸಿರು ಕಾನನದ ನಡುವೆ ಜಲಪಾತ ಹಸಿರಿನ ಕಾಡಿಗೆ ಸೀರೆಯುಡಿಸಿದಂತೆ ಕಾಣಿಸುತ್ತದೆ.

300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಆಯಾಸ ದೂರವಾಗಿ ಜಲಪಾತ ಪ್ರವಾಸಿಗರಲ್ಲಿ ಉತ್ಸಾಹ ಮೂಡಿಸುತ್ತದೆ. ಸಾರ್ವಜನಿಕರು ಜಲಪಾತದ ನೀರಿನಲ್ಲಿ ಮಿಂದೇಳುವ ದೃಶ್ಯ ಇಲ್ಲಿ ಸಾಮಾನ್ಯ.

ADVERTISEMENT
ಮೈದುಂಬಿ ಧುಮ್ಮುಕ್ಕುತ್ತಿರುವ ಮುತ್ಯಾಲಮಡುವು

ಜಲಪಾತದಿಂದ ಒಂದೆರಡು ಕಿ.ಮೀ ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಶಂಖು ಚಕ್ರ ಜಲಪಾತವಿದೆ. ಮಳೆಯಿಂದ ಬೋರ್ಗರೆಯುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ, ಯಾವುದೇ ಸುರಕ್ಷತೆ ಇಲ್ಲ. ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಲಾಪಾತ ನೋಡಲು ಬರುವವರಿಗೆ ಅಗತ್ಯ ರಕ್ಷಣೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ವಿಫುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಉದ್ಯಾನ, ಮಕ್ಕಳ ಆಟ, ಭದ್ರತೆಗಾಗಿ ಪೊಲೀಸ್‌ ಚೌಕಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮುತ್ಯಾಲಮಡುವು ಚೆಕ್‌ಡ್ಯಾಂ ಆಕರ್ಷಕ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.