ADVERTISEMENT

ಪ್ರಕೃತಿ ಸಂರಕ್ಷಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:02 IST
Last Updated 19 ಜುಲೈ 2024, 16:02 IST
ವಿಜಯಪುರದಲ್ಲಿ ಬುಧವಾರ ಪ್ರಕೃತಿ ಸಂರಕ್ಷಣೆ ಮಹತ್ವ ಮತ್ತು ಸಸಿ ನೆಡುವ ಕುರಿತು ತರಬೇತಿ ಕಾರ್ಯಗಾರ ನಡೆಯಿತು
ವಿಜಯಪುರದಲ್ಲಿ ಬುಧವಾರ ಪ್ರಕೃತಿ ಸಂರಕ್ಷಣೆ ಮಹತ್ವ ಮತ್ತು ಸಸಿ ನೆಡುವ ಕುರಿತು ತರಬೇತಿ ಕಾರ್ಯಗಾರ ನಡೆಯಿತು   

ವಿಜಯಪುರ(ದೇವನಹಳ್ಳಿ): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ಲೀಜನ್, ಪ್ರಕೃತಿ ಧರ್ಮ ಪೀಠಂ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರಕೃತಿ ಸಂರಕ್ಷಣೆ ಮಹತ್ವ ಮತ್ತು ಸಸಿ ನೆಡುವ ಕುರಿತು ತರಬೇತಿ ಕಾರ್ಯಗಾರ ನಡೆಯಿತು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ದಿನ್ನೂರು ಕೆ.ವೆಂಕಟೇಶ್ ಮಾತನಾಡಿ, ಮುಂದಿನ ಪೀಳಿಗೆ ಉತ್ತಮ  ಜೀವನ ನಡೆಸಬೇಕಾದರೆ ಈಗಿನಿಂದಲೇ ನಾವೆಲ್ಲರೂ ಪರಿಸರ ರಕ್ಷಣೆ ಜತೆಗೆ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.

ಪ್ರಕೃತಿ ಧರ್ಮ ಪೀಠಂ ಟ್ರಸ್ಟ್‌ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಪರಿಸರ ಸಂರಕ್ಷಣೆ ಎಂಬ ಪದ ಕೇವಲ ಜೂನ್‌ 5ಕ್ಕೆ ಸೀಮಿತವಾಗಿದೆ. ಸಸಿ ನೆಡುವ ನೆಪದಲ್ಲಿ ಪೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಬಳಿಕ ತಾವು ನೆಟ್ಟ ಸಸಿ ಏನಾಗಿದೆ ಎಂದು ತಿಳಿಯುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಬೇಸರಿಸಿದರು‌.

ADVERTISEMENT

ಸೀನಿಯರ್ ಚೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಶಿವಕುಮಾರ್, ರಾಷ್ಟ್ರೀಯ ಸಂಯೋಜಕ ವಿ.ಜಯರಾಂ, ಕಾರ್ಯದರ್ಶಿ ಚಿದಾನಂದಮೂರ್ತಿ, ಸಹಕಾರ್ಯದರ್ಶಿ ವಿ.ಆನಂದ್, ಖಜಾಂಚಿ ಎಸ್.ರಮೇಶ್, ಲೀಜನ್ ಸಂಪಾದಕರ ಚಂದ್ರಶೇಖರ್ ಹಡಪದ್,   ವಸಂತ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.