ಆನೇಕಲ್ : ಡಿಜಿಟಲ್ ಮಾಧ್ಯಮ ಬಂದರೂ ಪತ್ರಿಕೆ ಓದದಿದ್ದರೆ ಹಲವು ಮಂದಿಗೆ ಸಮಾಧಾನ ಇಲ್ಲ. ಮಳೆ–ಗಾಳಿಯೆನ್ನದೇ ಪ್ರತಿದಿನ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು ಸುದ್ದಿಯ ಸೇನಾನಿಗಳು.
ಸೆ.4 ಪತ್ರಿಕಾ ವಿತರಕರ ದಿನ. ಈ ನಿಟ್ಟಿನಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ನಿತ್ಯ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರು ತಮ್ಮ ಅನುಭವ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ವಿತರಕ ಯತೀಶ್ ಮಾತನಾಡಿ, ‘ಮುಂಜಾನೆ 5ರ ವೇಳೆಗೆ ಕೆಲಸ ಪ್ರಾರಂಭಿಸುತ್ತೇವೆ. ಎಲ್ಲ ರೂಟ್‌ಗಳ ಹುಡುಗರು ಹಂಚಿಕೆಗೆ ಬಂದರೆ ರೂಟ್‌ವಾರು ಹಂಚಿ ಕೆಲಸ ಮುಗಿಸಿಕೊಳ್ಳುತ್ತೇವೆ. ಕಾರಣಾಂತರದಿಂದ ಒಂದು ರೂಟಿನ ಹುಡುಗ ತಪ್ಪಿದರೂ ಆ ಮನೆಗಳನ್ನು ಹುಡುಕಿ ತಲುಪಿಸುವುದು ನಮ್ಮ ಜವಬ್ದಾರಿಯಾಗಿದೆ’.
ಪತ್ರಿಕಾ ವಿತರಣೆ ಜೀವನ ಭಾಗವಾಗಿದೆ. ಹಬ್ಬ ಹರಿ–ದಿನಗಳಾಗಲಿ, ಯಾವುದೇ ಕೆಲಸವಿದ್ದರೂ ಪತ್ರಿಕೆ ವಿತರಣೆಗೆ ಮಾತ್ರ ರಜೆಯಿಲ್ಲ. ಸೈಕಲ್‌ಗಳಲ್ಲಿ ಮನೆಗಳನ್ನು ತಲುಪುವ ಹುಡುಗರು ತಮ್ಮ ವಿದ್ಯಾಭ್ಯಾಸಕ್ಕಾಗಿ ನಾವು ನೀಡುವ ಕಿರು ಹಣ ಬಳಸಿಕೊಂಡು ಕೆಲಸ ಮಾಡತ್ತಾರೆ ಎಂದರು.
ಹೆಬ್ಬಗೋಡಿ ಪತ್ರಿಕಾ ವಿತರಕ ಶೈಲೇಶ್ ಪತ್ರಿಕೆ ವಿತರಣೆಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಪತ್ರಿಕೆ ವಿತರಿಸುವುದೇ ಇವರ ಕಾಯಕವಾಗಿದೆ. ಹೆಬ್ಬಗೋಡಿ ವಿವಿಧ ಭಾಗಗಳಿಗೆ ‘ಪ್ರಜಾವಾಣಿ’ಯನ್ನು ಮುಟ್ಟಿಸುವ ಕೆಲಸದಲ್ಲಿ ಸಂತಸ ತಂದಿದೆ. ಪ್ರತಿದಿನ ಬೆಳಗ್ಗೆ 5ಕ್ಕೆ ಪತ್ರಿಕೆ ವಿತರಣೆಗೆ ಹಾಜರಾಗುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.