ADVERTISEMENT

ಬಡವರಿಗೆ ನಿವೇಶನ ಹಂಚಿಕೆಗೆ ಒತ್ತಾಯ: ನಂದಗುಡಿಯಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:22 IST
Last Updated 25 ನವೆಂಬರ್ 2024, 15:22 IST
ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ ನಿವಾಸಿಗಳೊಂದಿಗೆ ತಾ.ಪಂ ಇಒ .ಸಿ.ಎನ್.ನಾರಾಯಣಸ್ವಾಮಿ ಮತ್ತು ತಹಶೀಲ್ದಾರ್ ಸೋಮಶೇಖರ್ ಮಾತನಾಡಿದರು
ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ ನಿವಾಸಿಗಳೊಂದಿಗೆ ತಾ.ಪಂ ಇಒ .ಸಿ.ಎನ್.ನಾರಾಯಣಸ್ವಾಮಿ ಮತ್ತು ತಹಶೀಲ್ದಾರ್ ಸೋಮಶೇಖರ್ ಮಾತನಾಡಿದರು   

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಸರ್ಕಾರಿ ಜಾಗದಲ್ಲಿ ನಿವೇಶನ ರಹಿತ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸಮತಾ ಸೈನಿಕ ದಳದಿಂದ ಈಚೆಗೆ ಪ್ರತಿಭಟನೆ ನಡೆಸಲಾಯಿತು.

ನಂದಗುಡಿಯಲ್ಲಿ ಸರ್ಕಾರಿ ಗೋಮಾಳವನ್ನು ಕೆಲವರು ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ನಿವೇಶನ ರಹಿತ, ಸ್ವಂತ ಸೂರು ಇಲ್ಲದ ಪರಿಶಿಷ್ಟ ಮತ್ತು ಅಲ್ಪ ಸಂಖ್ಯಾತ ಕುಟುಂಬಗಳಿಗೆ ಆ ಗೋಮಾಳದಲ್ಲಿ ನಿವೇಶನ ಅಭಿವೃದ್ಧಿಪಡಿಸಿ ನೀಡಬೇಕೆಂದು ಪ್ರತಿಭಟನನಿರತರು ಒತ್ತಾಯಿಸಿದರು.

ಅಧಿಕಾರಿಗಳ ಕುಮ್ಮಕ್ಕಿನಿಂದ ಕೆಲವರು ಸರ್ಕಾರಿ ಗೋಮಾಳ ಜಮೀನು ಕಬಳಿಸಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ಜಾಗದಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಬಡವರಿಗೆ ಹಂಚದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಚನ್ನಕೃಷ್ಣಪ್ಪ ಎಚ್ಚರಿಕೆ ನೀಡಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ಮತ್ತು ಕಾರ್ಯನಿರ್ವಾಹಣಾಧಿಕಾರಿ ಸಿ.ಎನ್ ನಾರಾಯಣಸ್ವಾಮಿ, ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು. ಎಲ್ಲಾರಿಗೂ ನಿವೇಶನ ನೀಡುವ ಭರವಸೆ ನೀಡಿದ ಮೇಲೆ ಧರಣಿ ವಾಪಸ್ ಪಡೆಯಲಾಯಿತು.

ಶ್ರೀಕಾಂತ್‌ರಾವಣ್, ನಂದಗುಡಿ ಶಿವಕುಮಾರ್, ನಲ್ಲಪ್ಪ, ಮಂಜುನಾಥ್, ವಡ್ಡಳ್ಳಿ ಶಿವು, ಮಹಿಳಾ ಅಧ್ಯಕ್ಷೆ ಸಾವಿತ್ರಮ್ಮ, ಗಾಯಿತ್ರಮ್ಮ, ನೇತ್ರಾವತಿ, ನಗೀನಾ, ಸುಬ್ರಮಣಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.