ADVERTISEMENT

ದೇವನಹಳ್ಳಿ | ಧಾರಾಕಾರ ಮಳೆ: ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:50 IST
Last Updated 22 ಅಕ್ಟೋಬರ್ 2024, 15:50 IST
ವಿಜಯಪುರ ಮಂಡಿಬೆಲೆ ರಸ್ತೆಯಲ್ಲಿ ರಾಜಕಾಲುವೆ ನೀರಿಗೆ ಅಡ್ಡವಾಗಿದ್ದ ಕಸವನ್ನು ಪೌರಕಾರ್ಮಿಕರು ತೆರವುಗೊಳಿಸಿದರು
ವಿಜಯಪುರ ಮಂಡಿಬೆಲೆ ರಸ್ತೆಯಲ್ಲಿ ರಾಜಕಾಲುವೆ ನೀರಿಗೆ ಅಡ್ಡವಾಗಿದ್ದ ಕಸವನ್ನು ಪೌರಕಾರ್ಮಿಕರು ತೆರವುಗೊಳಿಸಿದರು   

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳಲ್ಲಿ ಹರಿಯಬೇಕಾಗಿದ್ದ ಕೊಳಚೆ ನೀರೆಲ್ಲವೂ ರಸ್ತೆಗಳಲ್ಲಿ ಹರಿಯಿತು. ಇದರಿಂದ ವಾಹನಗಳು ಹಾಗೂ ಜನರ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಕೋಲಾರ ಮುಖ್ಯ ರಸ್ತೆಯಲ್ಲಿರುವ ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ನಿಲ್ಲುವುದಕ್ಕೆ ಸರಿಯಾಗಿ ತಂಗುದಾಣ ಇಲ್ಲದ ಕಾರಣ ಮಳೆಯಲ್ಲೇ ನೆನೆಯುತ್ತಾ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಮಳೆ ನೀರು ನಿಂತು ಕೆರೆಯಂತೆ ಆಗಿದೆ. ಮಂಡಿಬೆಲೆ ರಸ್ತೆಯಲ್ಲಿರುವ ರಾಜಕಾಲುವೆ ನೀರು ರಸ್ತೆಯಲ್ಲಿ ಹರಿದು ಕೆಲ ಮನೆಗಳಿಗೆ ನುಗ್ಗಿದೆ. ಪುರಸಭೆ ಸಿಬ್ಬಂದಿ ರಾಜಕಾಲುವೆಯಲ್ಲಿ ತುಂಬಿದ್ದ ಕಸ ತೆರವುಗೊಳಿಸಿದರು.

ADVERTISEMENT
ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.