ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸಕ್ತ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವು ರಫ್ತು ಮಾಡಿ ಹೊಸ ದಾಖಲೆ ಬರೆದಿದೆ.
ಕಳೆದ ವರ್ಷ 685 ಮೆಟ್ರಿಕ್ ಟನ್ ಮಾವು ರಫ್ತು ಮಾಡಲಾಗಿತ್ತು. ಈ ಬಾರಿ ಮಾವು ರಫ್ತು ಶೇ 20ರಷ್ಟು ಏರಿಕೆಯಾಗಿದೆ. ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಇಲ್ಲಿಂದ ಮಾವು ರಫ್ತು ಮಾಡಲಾಗಿದ್ದು, ಅಮೆರಿಕಕ್ಕೆ ಹೆಚ್ಚು ಮಾವು ಕಳಿಸಲಾಗಿದೆ.
ರಾಜ್ಯದ ಕೃಷಿ ಉತ್ಪನ್ನಗಳು ಬೆಂಗಳೂರು ವಿಮಾನ ನಿಲ್ದಾಣ ಸಮರ್ಥವಾಗಿ ಜಾಗತಿಕ ಮಾರುಕಟ್ಟೆ ತಲುಪಿಸುತ್ತಿದೆ ಎಂದು ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸುಧಾರಿತ ಶೀತಲಗೃಹ ವ್ಯವಸ್ಥೆ (ಕೋಲ್ಡ್ ಸ್ಟೋರೇಜ್) ಇದೆ. ಸಾಗಣೆಗೆ ಎಷ್ಟು ದಿನಗಳಾದರೂ ಮಾವಿನ ಹಣ್ಣಿನ ತಾಜಾತನ ಸಂರಕ್ಷಣೆ ಮಾಡಲಾಗುತ್ತಿದೆ. ಇದರಿಂದಾಗಿ ಇಡೀ ವಿಶ್ವಕ್ಕೆ ಇಲ್ಲಿಂದ ಮಾವು ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.