ADVERTISEMENT

ಸೂಲಿಬೆಲೆ: ಹೋಬಳಿಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 14:31 IST
Last Updated 26 ಜನವರಿ 2020, 14:31 IST
ಸೂಲಿಬೆಲೆ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ಪಥ ಸಂಚಲನ
ಸೂಲಿಬೆಲೆ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ಪಥ ಸಂಚಲನ   

ಸೂಲಿಬೆಲೆ: ಹೋಬಳಿಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಕಡೆ ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸಂಭ್ರಮದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.

ಸೂಲಿಬೆಲೆ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಸಂಸ್ಥಾಪಕ ಅಧ್ಯಕ್ಷ ಸೂ.ರಂ.ರಾಮಯ್ಯ ಅವರು ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್, ಸಂಸ್ಥೆ ಅಧ್ಯಕ್ಷ ಎಸ್.ಆರ್.ರಂಗನಾಥ್, ಮುಖ್ಯ ಶಿಕ್ಷಕ ಕೆ.ಸುರೇಶ್, ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಠ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಡಿ.ನಾರಾಯಣಸ್ವಾಮಿ ಹಾಗೂ ಡಿ.ಲಕ್ಷ್ಮೀನಾರಾಯಣ ನಡೆಸಿಕೊಟ್ಟರು.

ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ಹಿರಿಯ ಕನ್ನದ ಮಾಧ್ಯಮ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರವೆ ಕೃಷ್ಣಪ್ಪ ಅವರು ಧ್ವಜಾರೋಹಣ ಮಾಡಿದರು. ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ನಾರಾಯಣಸ್ವಾಮಿ ಧ್ವಜಾರೋಹಣ ನಡೆಸಿಕೊಟ್ಟರು.

ADVERTISEMENT

ದ್ಯಾವಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಮುಖಂಡರು ಹಾಗೂ ಶಾಲೆಯ ಮುಖ್ಯ ಶಿಕ್ಷಕ ರಾಜು, ಸಹ ಶಿಕ್ಷಕ ಚಂದ್ರು ಅವರು ಧ್ವಜಾರೋಹಣ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣಪ್ಪ ಕಂಬಳಿ, ಅವರು ಮಾತನಾಡಿ, ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕೊಡುಗೆಯಿಂದ ನಾವೆಲ್ಲ ಇಂದು ಒಂದಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಯಿತು. ಮಕ್ಕಳಿಗೆ ಪೋಷಕರು ಆಸ್ತಿ ಕೊಡುವ ಬದಲು ವಿದ್ಯೆಯನ್ನು ನೀಡಿದರೆ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಗೌರವ ತರುವಂತಹ ಕೆಲಸವಾಗುತ್ತದೆ’ ಎಂದರು.

ನವ ಚೇತನ ಚಾರಿಟಬಲ್ ಟ್ರಸ್ಟ್ ನ ಡಿ.ಎಂ.ಮುನಿರಾಜು ಮಾತನಾಡಿ, ‘ನಾವು ಹುಟ್ಟಿ ಬೆಳೆದ ಊರು ಮತ್ತು ಶಾಲೆಯನ್ನು ಮರೆಯಬಾರದು. ನಮ್ಮನ್ನು ಬೆಳೆಸಿ ವಿದ್ಯಾವಂತರನ್ನಾಗಿಸಿದ ಗ್ರಾಮದ ಋಣವನ್ನು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುವುದರ ಮೂಲಕ ತೀರಿಸಬೇಕು’ ಎಂದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮುನಿನಾರಯಣಪ್ಪ, ಸಿಆರ್‌ಪಿ ಸುಮಂಗಳಮ್ಮ ಮಾತನಾಡಿದರು.

ಚಿಕ್ಕಅರಳಗೆರೆ ಮತ್ತು ದ್ಯಾವಸಂದ್ರ ಶಾಲೆಯ ಮಕ್ಕಳಿಗೆ ನವ ಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಊಟದ ತಟ್ಟೆ, ಲೋಟ ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ಗಣರಾಜ್ಯೋತ್ಸವದ ಪ್ರಯುಕ್ತ ಉಡುಗೊರೆಯಾಗಿ ನೀಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಮುನಿಗಂಗಪ್ಪ, ಶಿಕ್ಷಣ ಇಲಾಖೆಯ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.