ಬೆಂಗಳೂರು: ಸಮಾಜಮುಖಿ ಪ್ರಕಾಶನವು 2023ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದೆ.
ದೀಪಾ ಹಿರೇಗುತ್ತಿ ಅವರ ‘ಬಯಕೆ’, ಎಂ.ನಾಗರಾಜ ಶೆಟ್ಟಿ ಅವರ ‘ಮುಝಫರ್’, ಶ್ರೀಹರ್ಷ ಸಾಲಿಮಠ ಅವರ ‘ಹಲ್ಲೀರ ಮತ್ತು ರಂಗನಾಯಕಿ’, ದೀಪ್ತಿ ಭದ್ರಾವತಿ ಅವರ ‘ನಮ್ಮವರು’ ಹಾಗೂ ಪ್ರೇಮಲತಾ ಬಿ. ಅವರ ‘ಗೊಡ್ಡು’ ಕಥೆ ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಕಥಾ ಪುರಸ್ಕಾರವು ತಲಾ ₹ 5 ಸಾವಿರ ನಗದು ಒಳಗೊಂಡಿದೆ.
ನಂದಿನಿ ಹೆದ್ದುರ್ಗ, ಅನಿಲ್ ಟಿ. ಗುನ್ನಾಪುರ, ಸಂಜೋತಾ ಪುರೋಹಿತ, ಗೀತಾ ಕುಂದಾಪುರ, ಚಂದ್ರಪ್ರಭ ಕಠಾರಿ, ನಳಿನಿ ಭೀಮಪ್ಪ,
ಆರ್.ಪವನ್‌ಕುಮಾರ್, ಪ್ರಕಾಶ್ ಪೊನ್ನಾಚಿ, ಸುಧಾ ಆಡುಕಳ, ಅಬ್ದುಲ್ ರಹಿಮಾನ್ ಬೀದರ್ ಕೋಟೆ, ಶ್ರೀದೇವಿ ಕೆರೆಮನೆ, ಆನಂದ ಕುಂಚನೂರು, ಸುಮಾ ರಮೇಶ್, ಭಾಗ್ಯಜ್ಯೋತಿ ಹಿರೇಮಠ ಹಾಗೂ ಮಿರ್ಜಾ ಬಷೀರ್ ಅವರ ಕತೆಗಳು ಸಮಾಜಮುಖಿ ವಾರ್ಷಿಕ ಕಥಾ ಸಂಕಲನಕ್ಕೆ ಆಯ್ಕೆಯಾಗಿವೆ
ಕಥಾ ಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯನಂತರ, ಎರಡನೇ ಹಂತದ 50 ಕಥೆಗಳನ್ನು ಲೇಖಕ ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ
ಹರ್ಗಿ ಮಾಡಿದ್ದಾರೆ ಎಂದು ಸಮಾಜಮುಖಿ ಪ್ರಕಾಶನದ ಚಂದ್ರಕಾಂತ ವಡ್ಡು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.