ADVERTISEMENT

ಹೊಸಕೋಟೆ: ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಸಂಭ್ರಮದ ಸಂಕ್ರಾಂತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 13:42 IST
Last Updated 18 ಜನವರಿ 2020, 13:42 IST
ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಯ ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀರಾಮ್‌ ಆಡಳಿತ ಮಂಡಳಿ ಸದಸ್ಯೆ ವಿಜಯಲಕ್ಷ್ಮಿ ಗಣ್ಯರು ಇದ್ದರು
ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಯ ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀರಾಮ್‌ ಆಡಳಿತ ಮಂಡಳಿ ಸದಸ್ಯೆ ವಿಜಯಲಕ್ಷ್ಮಿ ಗಣ್ಯರು ಇದ್ದರು   

ಹೊಸಕೋಟೆ: ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿರುವ ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಸಂಕ್ರಾಂತಿ ಉತ್ಸವವನ್ನು ಸಡಗರ ಸಂಭ್ರಮದಿಂದ ಶನಿವಾರ ಆಚರಿಸಲಾಯಿತು.

ಗೋವಿಗೆ ಪೂಜೆ ನೆರವೇರಿಸಲಾಯಿತು. ಮಕ್ಕಳು ಸಾಂಪ್ರದಾಯಿಕ ಬಟ್ಟೆ ಧರಿಸಿದ್ದರು. ಶಾಲೆಯ ಮುಂಭಾಗದಲ್ಲಿ ಒಲೆಯಲ್ಲಿ ಹಾಲು ಉಕ್ಕಿಸಿ ಅದಕ್ಕೆ ಪೂಜೆ ನೆರವೇರಿಸಲಾಯಿತು.

ಶಾಲೆಯನ್ನು ಕಬ್ಬು ಮತ್ತು ಮಡಿಕೆಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ‘ಈಗಿನ ಕಾಲದ ಮಕ್ಕಳಿಗೆ ನಮ್ಮ ಪ್ರಾಚೀನ ಹಬ್ಬಗಳ ರೀತಿ ನೀತಿಗಳು ಗೊತ್ತಿಲ್ಲ. ಆದ್ದರಿಂದ ಶಾಲೆಯಲ್ಲಿ ಭಾರತದ ಹಿರಿಮೆಯನ್ನು ತಿಳಿಸಲು ಪೂರ್ವಜರು ಪಾಲಿಸಿಕೊಂಡು ಬಂದಿದ್ದ ಹಬ್ಬ ಹರಿದಿನಗಳ ಪರಿಚಯ ಮಾಡಲಾಗುತ್ತಿದೆ. ಮಕ್ಕಳಿಗೆ ದೇಶದ ಬಗ್ಗೆ ಅಭಿಮಾನ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

ADVERTISEMENT

ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.