ಹೊಸಕೋಟೆ:ತಾಲ್ಲೂಕಿನ ಜಡಿಗೇನಹಳ್ಳಿ ಮತ್ತು ಅನುಗೊಂಡನಹಳ್ಳಿಯ 30 ಕೆರೆಗಳಿಗೆ ಕೆ.ಆರ್.ಪುರದಿಂದ ನೀರು ತುಂಬುವ ₹ 100 ಕೋಟಿ ವೆಚ್ಚದ ಯೋಜನೆ, ವಿವಿಧ ಕಾಮಗಾರಿಗಳಿಗೆ ಪಟ್ಟಣದಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಗೈರಾದರು.
ಇಬ್ಬರೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರನ್ನು ಹಾಡಿ ಹೊಗಳಿದರು.
‘ಎಂ.ಟಿ.ಬಿ. ನಾಗರಾಜ್‌ಗೆ ಶ್ರೀಮಂತಿಕೆ ಇದ್ದರೂ ಆತ ಸರಳ ತನ್ನ ಕ್ಷೇತ್ರಕ್ಕೆ ಅನುದಾನ ಸಿಗಲಿಲ್ಲ. ತನ್ನ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಸಿಕ್ಕಿದ್ದ ಮಂತ್ರಿ ಪದವಿಯನ್ನೂ ಲೆಕ್ಕಿಸದೆ ರಾಜೀನಾಮೆ ಕೊಟ್ಟ ಪ್ರಾಮಾಣಿಕ. ಅಂಥವರು ಯಾವುದೇ ಪಕ್ಷದಲ್ಲಿದ್ದರೂ ಗೆಲ್ಲಿಸಬೇಕು. ಮುಂದೆ ಹೊಸಕೋಟೆಯು ತಮ್ಮ ಕ್ಷೇತ್ರ ಶಿಕಾರಿಪುರದಂತೆ ಅಭಿವೃದ್ಧಿಯಾಗಲಿ. ಅದಕ್ಕಾಗಿ ತಾವು ನಾಗರಾಜ್ ಜೊತೆಯಲ್ಲಿ ನಿಲ್ಲಲು ಸಿದ್ದ. ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗಿಲಿಲ್ಲ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.