ADVERTISEMENT

ಹೊಸಕೋಟೆ| ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 14:31 IST
Last Updated 20 ಜನವರಿ 2020, 14:31 IST
ಹೊಸಕೋಟೆಯಲ್ಲಿ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.
ಹೊಸಕೋಟೆಯಲ್ಲಿ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.   

ಹೊಸಕೋಟೆ: ನಗರದ ಬಸವೇಶ್ವರ ಪ್ರತಿಮೆಯ ಬಳಿ ತಾಲ್ಲೂಕು ವೀರಶೈವ ಸಮಾಜ, ವೀರಶೈವ ಯುವ ವೇದಿಕೆ ಹಾಗೂ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸ್ಮರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಶಿವಗಂಗೆಯ ಮೇಲಣಗವಿ ಮಠದ ಅಧ್ಯಕ್ಷರಾದ ಶ್ರೀಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

‘ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಸ್ವಾಮೀಜಿಯವರು ಅನ್ನದಾಸೋಹ ಮತ್ತು ವಿದ್ಯಾದಾನದ ಮೂಲಕ ವಿಶ್ವಪ್ರಸಿದ್ಧಿ ಪಡೆದಿದ್ದರು. ಅಂತಹ ಮಹಾಪುರಷರ ಕಾಲಘಟ್ಟದಲ್ಲಿ ನಾವು ಜೀವಿಸಿರುವುದು ನಮ್ಮ ಪುಣ್ಯ ಎಂದು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಕುಮಾರ್ ಹೇಳಿದರು. ಅವರ ಪುಣ್ಯಸ್ಮರಣೆಯ ದಿನವನ್ನು ಅದ್ದೂರಿಯಾಗಿ ಜಾತಿ, ಮತ. ಪಕ್ಷಗಳ ಭೇದವಿಲ್ಲದೆ ಆಚರಿಸಬೇಕು’ ಎಂದು ಯುವ ವೇದಿಕೆಯ ಪರಮೇಶ್ ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ವೀರ ಶೈವ ಸಮಾಜದ ನಗರ ಅಧ್ಯಕ್ಷ ಶಿವಕುಮಾರ್, ಟೌನ್ ಕೋ ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ನವೀನ್, ಪುರಸಭೆಯ ಮಾಜಿ ಅಧ್ಯಕ್ಷ ರುದ್ರಾರಾಧ್ಯ, ಮುಖಂಡರಾದ ಜ್ಞಾನಮೂರ್ತಿ, ಉದಯ, ಸತೀಶ್ ಕುಮಾರ್, ಜೆಸಿಆರ್ ರವಿ, ಎಸ್.ಎನ್. ಮಂಜುನಾಥ್, ಮೈತ್ರಿದೇವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.