ದೊಡ್ಡಬಳ್ಳಾಪುರ: ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಶೌರ್ಯ ಜಾಗರಣೆ ರಥಯಾತ್ರೆಗೆ ಭಾನುವಾರ ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬಯಲು ಬಸವಣ್ಣ ದೇವಾಲಯದಿಂದ ಪ್ರಾರಂಭವಾದ ರಥಯಾತ್ರೆ ಹಾಗೂ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥಕ್ಕೆ ಹೂ ಸಮರ್ಪಿಸುವ ಮೂಲಕ ನಾಗರಿಕರು ಸ್ವಾಗತಿಸಿದರು.
ನಗರದ ಇಸ್ಲಾಂಪುರದಲ್ಲಿ ಮುಸ್ಲಿಮರು ಕೂಡ ರಥವನ್ನು ಸ್ವಾಗತಿಸಿದರು. ಬಜರಂಗದಳ ಸ್ಥಾಪನೆಯಾಗಿ 60 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಐತಿಹಾಸಿಕ ರಥಯಾತ್ರೆ 90ರ ದಶಕದಲ್ಲಿ ನಡೆದ ರಾಮಮಂದಿರ ರಥಯಾತ್ರೆಯಷ್ಟೇ ಪ್ರಮುಖವಾಗಿದೆ. ಚಿತ್ರದುರ್ಗದಲ್ಲಿ ಸೆ.25ರಂದು ಆರಂಭವಾಗಿದ್ದು ಅ.10ರಂದು ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಬಜರಂಗದಳ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.