ADVERTISEMENT

ಟೋಲ್ ಶುಲ್ಕ ಕಟ್ಟದೆ ಮಚ್ಚು ತೋರಿಸಿದ!

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 21:30 IST
Last Updated 24 ಜೂನ್ 2021, 21:30 IST
ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಬಳಿಯಿರುವ ಟೋಲ್ ನಲ್ಲಿ ಸುಂಕ ಕಟ್ಟದೆ ಇರುವ ವ್ಯಕ್ತಿಯ ಸಹಿತ ಕಾರನ್ನು ಪೊಲೀಸರು ವಶಕ್ಕೆ ಪಡೆದರು
ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಬಳಿಯಿರುವ ಟೋಲ್ ನಲ್ಲಿ ಸುಂಕ ಕಟ್ಟದೆ ಇರುವ ವ್ಯಕ್ತಿಯ ಸಹಿತ ಕಾರನ್ನು ಪೊಲೀಸರು ವಶಕ್ಕೆ ಪಡೆದರು   

ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಟೋಲ್‌ನಲ್ಲಿ ಶುಲ್ಕ ಪಾವತಿಸುವಂತೆ ಕೇಳಿದ ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿರುವ ಆರೋಪದಡಿ ಕಾರು ಚಾಲಕ ಚಂದ್ರಪ್ಪ ಅವರನ್ನು ವಶಕ್ಕೆ ಪಡೆದಿರುವ ಚಿಕ್ಕಜಾಲ ಪೊಲೀಸರು, ಕಾರನ್ನು ವಶಕ್ಕೆ ಪಡೆದರು.

ದೇವನಹಳ್ಳಿ ಕಡೆಯಿಂದ ಬೆಂಗಳೂರಿನ ಕಡೆಗೆ ಪೋರ್ಡ್ ಕಾರಿನಲ್ಲಿ ಹೊರಟಿದ್ದ ತೆಲ್ಲೋಹಳ್ಳಿಯ ಚಂದ್ರಪ್ಪ ಎಂಬುವವರು, ’ನಾವು ಸ್ಥಳೀಯರು ಟೋಲ್ ಕಟ್ಟುವುದಿಲ್ಲ ಎಂದು ಕೂಗಾಡಿದ್ದಾರೆ. ಈ ವೇಳೆ ಟೋಲ್ ನಿರ್ವಾಹಕ ಶ್ರೀಧರ್ಎಂಬುವವರು, 5 ಕೀ.ಮೀ.ವ್ಯಾಪ್ತಿಯೊಳಗಿನ ಹಳ್ಳಿಗಳ ಜನರಿಗೆ ಮಾತ್ರವೇ ಟೋಲ್ ನಲ್ಲಿ ವಿನಾಯಿತಿ ಇದೆ. ಉಳಿದ ಎಲ್ಲರೂ ಟೋಲ್ ಕಟ್ಟಬೇಕು ಎಂದು ತಿಳಿಸಿದ್ದಾರೆ. ಆದರೂ, ಟೋಲ್ ಸುಂಕ ಕಟ್ಟಲು ನಿರಾಕರಿಸಿದ ಚಂದ್ರಪ್ಪ, ಕಾರಿನಲ್ಲಿದ್ದ ಮಚ್ಚು ತೋರಿಸಿ, ಪರಿಣಾಮ ನೆಟ್ಟಗಿರಲ್ಲ‘ಎಂದು ಬೆದರಿಕೆ ಹಾಕಿದ್ದಾರೆ. ಟೋಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಚಿಕ್ಕಜಾಲ ಪೊಲೀಸರು ಕಾರು ಚಾಲಕನಿಂದ ಮಚ್ಚು ಹಾಗೂ ಕಾರು ಸಹಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT